ಮೋದಿ ಅಣ್ಣನ ಮಗಳ ಪರ್ಸ್ ಕದ್ದ ಆರೋಪಿ ಅಂದರ್..!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಧಾನಿ ಮೋದಿ ಅಣ್ಣನ ಮಗಳ ಪರ್ಸ್ ಕದ್ದುಕೊಂಡು ಹೋಗಿದ್ದ ಆರೋಪಿಯನ್ನು ಅರೆಸ್ಟ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನೋನು ಎಂಬ ಕಳ್ಳನನ್ನು ಅರೆಸ್ಟ್ ಮಾಡಿರೋ ಪೊಲೀಸರು ಮೋದಿ ಅಣ್ಣನ ಮಗಳು ದಮಯಂತಿಯ ಪರ್ಸ್ ಮತ್ತು ಅದರಲ್ಲಿದ್ದ ದುಡ್ಡು, ದಾಖಲೆಗಳನ್ನು ವಾಪಸ್ ಕೊಟ್ಟಿದ್ದಾರೆ.

ನಿನ್ನೆ ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಪ್ರಧಾನಿ ಮೋದಿ ಅಣ್ಣನ ಮಗಳು ದಮಯಂತಿ ಪರ್ಸ್ ಕಳವಾಗಿತ್ತು. ಅಮೃತಸರದಿಂದ ಬಂದಿದ್ದ ದಮಯಂತಿ ಮತ್ತು ಕುಟುಂಬದವರು ಸಿವಿಲ್ ಲೈನ್ಸ್ ನಲ್ಲಿರೋ ಗುಜರಾತ್ ಸಮಾಜ್ ಭವನ ಕಟ್ಟಡದಲ್ಲಿ ರೂಂ ಬುಕ್ ಮಾಡಿದ್ದರು. ಹಳೆ ದಿಲ್ಲಿಯಿಂದ ಅವರು ಆಟೋ ಮೂಲಕ ತಮ್ಮ ಕುಟುಂಬಸ್ಥರೊಂದಿಗೆ ಗುಜರಾತ್ ಸಮಾಜ್ ಭವನ ತಲುಪಿದ್ದರು. ಆದ್ರೆ ಆಟೋದಿಂದ ಇಳಿಯುವಾಗ ಎನ್ನುವಷ್ಟರಲ್ಲಿ ಸ್ಕೂಟಿಯಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪರ್ಸ್ ಕದ್ದು ಓಡಿಹೋಗಿದ್ದರು. ದಮಯಂತಿ ಅವರ ಪರ್ಸ್‍ನಲ್ಲಿ 56 ಸಾವಿರ ರೂಪಾಯಿ ನಗದು ಮತ್ತು 2 ಮೊಬೈಲ್ ಮತ್ತು ಕೆಲವೊಂದು ದಾಖಲೆಗಳಿದ್ದವು.

Contact Us for Advertisement

Leave a Reply