ಜಪಾನ್ ಪ್ರವಾಹಕ್ಕೆ ಮೋದಿ ಸಂತಾಪ..! ಕರ್ನಾಟಕದಲ್ಲಿ ಆದಾಗ ಮೌನ..!?

ಕರ್ನಾಟಕದಲ್ಲಿ ಭೀಕರ ಪ್ರವಾಹ ಬಂದರೂ ಸಹ ಪ್ರಧಾನಿ ಮೋದಿ ಬಾಯಿ ಬಿಟ್ಟಿರಲಿಲ್ಲ. ಒಂದು ಟ್ವೀಟ್ ಕೂಡ ಮಾಡಿರಲಿಲ್ಲ. ಪರಿಹಾರ ಅಂತೂ ಕೇಳಿ ಕೇಳಿ ಸುಸ್ತಾಗಿ ಕೊನೆಗೆ 1200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು. ಆದ್ರೆ ಈಗ ಟೈಫೂನ್ ಹಿಗಿಬಿಸ್ ಪೀಡಿತ ಜಪಾನ್ ಗೆ ಪ್ರಧಾನಿ ನರೇಂದ್ರ ಮೋದಿ ನೆರವು ನೀಡಲು ಮುಂದಾಗಿದ್ದಾರೆ. ಭಾರತೀಯ ನೌಕಾಪಡೆ ಜಪಾನ್ ಗೆ ತೆರಳುತ್ತಿದ್ದು, ನೆರವಿನ ಹಸ್ತ ನೀಡಲು ಸಜ್ಜುಗೊಂಡಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಭೀಕರ ಹಿಗಿಬಿಸ್ ಚಂಡಮಾರುತಕ್ಕೆ ಈವರೆಗೂ 35 ಜನರು ಸಾವನ್ನಪ್ಪಿದ್ದು, 17 ಮಂದಿ ನಾಪತ್ತೆಯಾಗಿದ್ದಾರೆ. ಚಂಡಮಾರುತ ಎದುರಿಸಲು ಜಪಾನ್ ನ ಜನತೆ ಹಾಗೂ ನನ್ನ ಸ್ನೇಹಿತ ಶಿಂಜೋ ಅಬೆ ನೇತೃತ್ವದ ನಾಯಕತ್ವ ಸಜ್ಜುಗೊಂಡಿದ್ದು, ಉಂಟಾಗಿರುವ ದುಷ್ಪರಿಣಾಮಗಳನ್ನು ಪರಿಣಾಮಕಾರಿಯಾಗಿ ಹಾಗೂ ತ್ವರಿತಗತಿಯಲ್ಲಿ ನಿರ್ವಹಣೆ ಮಾಡಲಿವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಜಪಾನ್ ನಲ್ಲಿ ಟೈಫೂನ್ ಗೆ ಜೀವ ಕಳೆದುಕೊಂಡಿರುವವರಿಗೆ ಭಾರತೀಯರ ಪರವಾಗಿ ಸಂತಾಪ ಸೂಚಿಸುತ್ತೇನೆ, ವಿಪತ್ತಿನಿಂದ ಜಪಾನ್ ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಆಶಿಸುವುದಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

Contact Us for Advertisement

Leave a Reply