ಅವನತಿಯತ್ತ ವಿಶ್ವದ ಅತಿ ದೊಡ್ಡ ಮಂಜುಗಡ್ಡೆ!

masthmagaa.com

ಜಗತ್ತಿನ ಅತಿ ದೊಡ್ಡ ಐಸ್‌ಬರ್ಗ್‌ ಅಥ್ವಾ ಮಂಜುಗಡ್ಡೆಯ ಉಳಿದಿರೋ ಒಂದು ಭಾಗ ಕರಗ್ತಾಯಿದೆ ಅಂತ ನಾಸಾ ಹೇಳಿದೆ. ಇತ್ತೀಚಿನ ಸ್ಯಾಟ್‌ಲೈಟ್‌ ಇಮೇಜ್‌ನಿಂದ ಈ ವಿಷಯ ತಿಳಿದು ಬಂದಿದೆ. ಅಂಟಾರ್ಟಿಕ್‌ ಐಸ್‌ಬರ್ಗ್‌ A-76A ಶೀಘ್ರದಲ್ಲೇ ಕಣ್ಮರೆಯಾಗಲಿದೆ. ಇದು ವರ್ಷಕ್ಕಿಂತ ಜಾಸ್ತಿ ಸಮಯದಿಂದ ಅಂಟಾರ್ಕ್ಟಿಕಾದ ಉದ್ದಕ್ಕೂ ನಿಧಾನವಾಗಿ ಚಲಿಸುತ್ತಿತ್ತು, ಆದ್ರೆ ಈಗ ಅದ್ರ ಕರಗುವಿಕೆ ವೇಗ ಹೆಚ್ಚಾಗ್ತಿದೆ. ಮತ್ತು ಐಸ್‌ಬರ್ಗ್‌ ಅದರ ಅವನತಿಯತ್ತ ಸಾಗ್ತಿದೆ ಅಂತ ನಾಸಾ ಹೇಳಿದೆ. ಇನ್ನು 2021 ಜೂನ್‌ನಲ್ಲಿ ಇದರ ಅಳತೆ ಮಾಡಿದ್ದು, ಈ ಐಸ್‌ಬರ್ಗ್‌ 135 ಕಿಲೋಮೀಟರ್‌ ಉದ್ದ, 26 ಕಿಲೋಮೀಟರ್‌ ಅಗಲವಿದೆ. ಇದು ಲಂಡನ್‌ನ ಎರಡು ಪಟ್ಟು ಗಾತ್ರಕ್ಕೆ ಸಮ ಇದೆ ಅಂತ ಅಮೆರಿಕಾದ ಐಸ್‌ ಸೆಂಟರ್‌ ಹೇಳಿತ್ತು. ಅಂದ್ಹಾಗೆ ಈ A-76A ಮಂಜುಗಡ್ಡೆ, ಈ ಮೊದಲು ಅತಿದೊಡ್ಡ ಮಂಜುಗಡ್ಡೆಯಾಗಿದ್ದ A-76ನ ಭಾಗವಾಗಿತ್ತು. ಇದು ಮೇ 2021ರಲ್ಲಿ ಅಂಟಾರ್ಕ್ಟಿಕಾದ ರೋನ್ನೆ ಐಸ್ ಶೆಲ್ಫ್‌ನ ಪಶ್ಚಿಮ ಭಾಗದಿಂದ ಬೇರೆಯಾಗಿ, 76A, 76B ಮತ್ತು 76C ಅನ್ನೋ ಮೂರು ತುಂಡುಗಳಾಗಿ ವಿಭಜನೆಯಾಗಿತ್ತು. ಈ ಮೂರು ತುಂಡುಗಳಲ್ಲಿ ಈಗ ಕರಗ್ತಿರೋ A-76A ಐಸ್‌ಬರ್ಗ್‌ ಅತಿ ದೊಡ್ಡ ಮಂಜುಗಡ್ಡೆಯಾಗಿದೆ.

-masthmagaa.com

Contact Us for Advertisement

Leave a Reply