ನಾಸಾ: ಅನ್ಯಗ್ರಹದಲ್ಲಿ ಮೋಡಗಳ ಪತ್ತೆ! ಹಾಗಾದ್ರೆ ಜೀವಿಗಳು ಇವೆಯಾ?

masthmagaa.com:

ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾದ ಜೇಮ್ಸ್‌ವೆಬ್‌ ಟೆಲಿಸ್ಕೋಪ್‌ ಪ್ರತಿ ಬಾರಿ ಸ್ಪೇಸ್‌ನಲ್ಲಿನ ಅಚ್ಚರಿಗಳ ಬಗ್ಗೆ ಏನಾದ್ರೂ ಒಂದು ಮಾಹಿತಿಯನ್ನ ರಿವೀಲ್‌ ಮಾಡ್ತಾನೆ ಇರುತ್ತೆ. ಈಗ ಎಕ್ಸೊಪ್ಲಾನೆಟ್‌ ಅಂದ್ರೆ ನಮ್ಮ ಸೌರವ್ಯೂಹದ ಹೊರಗಿನ ಗ್ರಹದಲ್ಲಿನ ವಾತಾವರಣದ ಬಗ್ಗೆ ಮಾಹಿತಿ ಕಳುಹಿಸಿದೆ. WASP-39b ಅನ್ನೋ ಅನ್ಯಗ್ರಹ ಸೂರ್ಯನಿಂದ 700 ಜ್ಯೋತಿ ವರ್ಷಗಳಷ್ಟು ದೂರದಲ್ಲಿದೆ. ಈ ಗ್ರಹದಲ್ಲಿ ಮೋಡಗಳ ರಚನೆ ಜೊತೆಗೆ ರಾಸಾಯನಿಕ ಕ್ರಿಯೆಗಳು ಕೂಡ ನಡೀತಿರೋ ಬಗ್ಗೆ ಜೇಮ್ಸ್‌ವೆಬ್‌ ಮಾಹಿತಿಯನ್ನ ರವಾನಿಸಿದೆ. ಇದ್ರಿಂದ ಎಕ್ಸೊಪ್ಲಾನೆಟ್‌ ಬಗ್ಗೆ ಇನ್ನು ಹೆಚ್ಚಿನ ಅಧ್ಯಯನಕ್ಕೆ ಸಹಾಯವಾಗಲಿದೆ ಅಂತ ನಾಸಾ ಹೇಳಿದೆ. ಆದ್ರೂ ಈ ಅನ್ಯಗ್ರಹಗಳಲ್ಲಿ ಜೀವಿಗಳು ಇರ್ಬೋದಾ ಅನ್ನೊದನ್ನ ಹೇಳೋಕೆ ಸಾಧ್ಯವಿಲ್ಲ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply