ಸೆಪ್ಟೆಂಬರ್‌ನಲ್ಲಿ ಪಾಕ್‌ಗೆ ವಾಪಸ್‌ ಬರಲಿದ್ದಾರೆ ನವಾಜ್‌ ಷರೀಫ್!

masthmagaa.com:

ದೇಶ ಬಿಟ್ಟು ಬ್ರಿಟನ್‌ನಲ್ಲಿ ವಾಸವಾಗಿರೋ ಪಾಕ್‌ನ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಇದೇ ಸೆಪ್ಟಂಬರ್‌ನಲ್ಲಿ ತಮ್ಮ ಮಾತೃಭೂಮಿ ಪಾಕಿಸ್ತಾನಕ್ಕೆ ಬರಲಿದ್ದಾರೆ ಅಂತ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ನವಾಜ್‌ ಷರೀಫ್‌ರ ಪಕ್ಷ ಅಂದ್ರೆ ಈಗ ಪಾಕಿಸ್ತಾನದಲ್ಲಿ ಆಡಳಿತ ಮಾಡ್ತಿರೋ ಪಕ್ಷದ ಹಿರಿಯ ನಾಯಕರು ಈ ಬಗ್ಗೆ ಮಾಹಿತಿ ನೀಡಿರೋದಾಗಿ ವರದಿಯಾಗಿದೆ. ಅಂದ್ಹಾಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿರೋ ನವಾಜ್‌ ಷರೀಫ್‌ಗೆ ಈಗಾಗಲೇ ಕೆಲವು ವರ್ಷಗಳ ಕಾಲ ಜೈಲು ಶಿಕ್ಷೆಯನ್ನ ಕೂಡ ಪ್ರಕಟ ಮಾಡಲಾಗಿತ್ತು. ಆದ್ರೆ ಕೋರ್ಟ್‌ಗೆ ಮನವಿ ಮಾಡಿ 2019ರಲ್ಲಿ ಚಿಕಿತ್ಸೆಗೆ ಅಂತ ಲಂಡನ್‌ಗೆ ಹೋದ್ರು. ಅಂದ್ರೆ ಇಮ್ರಾನ್‌ ಖಾನ್‌ನ ಪ್ರಧಾನಿಯಾಗಿದ್ದ ಟೈಂನಲ್ಲಿ. ಆದ್ರೆ ಇದುವರೆಗೂ ಕೂಡ ವಾಪಾಸ್‌ ಬಂದಿಲ್ಲ. ಎಲ್ಲಿ ಇಮ್ರಾನ್‌ ಖಾನ್‌ ಇನ್ಯಾವ ಕೇಸ್‌ ಹಾಕಿ ಒಳಗೆ ಹಾಕುಸ್ತಾರೋ ಅನ್ನೋ ಭಯದಲ್ಲಿ ಅವರು ಈ ಕಡೆ ತಲೆ ಕೂಡ ಹಾಕಿರಲಿಲ್ಲ. ಈಗ ಅವರ ತಮ್ಮ ಶೆಹಬಾಜ್‌ ಷರೀಫ್‌ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿರೋದ್ರಿಂದ ಮತ್ತೆ ಇಲ್ಲಿಗೆ ಬರಲಿದ್ದಾರೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply