masthmagaa.com:

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್​ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ ಸುಶಾಂತ್ ಅವರ ಗೆಳತಿ ರಿಹಾ ಚಕ್ರಬರ್ತಿಗೆ ಡ್ರಗ್ ಡೀಲರ್​ಗಳ ಜೊತೆ ಸಂಪರ್ಕ ಇತ್ತು ಎಂಬ ವಿಚಾರ ಬಾಲಿವುಡ್​ನಲ್ಲಿ ದೊಡ್ಡ ಕೋಲಾಹಲ ಎಬ್ಬಿಸಿದೆ. ಇದರ ಬೆನ್ನಲ್ಲೇ ಸುಶಾಂತ್ ಪ್ರಕರಣದಲ್ಲಿ ಡ್ರಗ್​ ವಿಚಾರ ಕುರಿತು ತನಿಖೆ ನಡೆಸಲು ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯುರೋ (NCB) ಅಧಿಕಾರಿಗಳ ತಂಡ ದೆಹಲಿಯಿಂದ ಮುಂಬೈಗೆ ಹೊರಟಿದೆ.

ಮುಂಬೈನಲ್ಲಿರುವ ಡ್ರಗ್ ಪೆಡ್ಲರ್​ಗಳ ಜಾಲದ ಕುರಿತು ತನಿಖೆ ಶುರು ಮಾಡಲು ಮುಂಬೈನಲ್ಲಿರುವ ಎನ್​ಸಿಬಿ ತಂಡಕ್ಕೆ ಈಗಾಗಲೇ ಸೂಚಿಸಲಾಗಿದೆ. ಜೊತೆಗೆ ಬಾಲಿವುಡ್​​ನಲ್ಲಿ ಆ್ಯಕ್ಟಿವ್ ಆಗಿರುವ ಡ್ರಗ್ ಜಾಲದ ಮೇಲೂ ಕಣ್ಣಿಡುವಂತೆ ಸೂಚಿಸಲಾಗಿದೆ ಅಂತ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯುರೋ ತಿಳಿಸಿದೆ. ಶೀಘ್ರದಲ್ಲೇ ರಿಹಾ ಚಕ್ರಬರ್ತಿಗೆ NCB ಸಮನ್ಸ್ ಜಾರಿ ಮಾಡುವ ಸಾಧ್ಯತೆ ಇದೆ.

ಇನ್ನು ರಿಹಾ ಚಕ್ರಬರ್ತಿಗೆ ಡ್ರಗ್​ ಡೀಲರ್​ಗಳ ಜೊತೆ ಸಂಪರ್ಕ ಇತ್ತು ಎಂಬ ವಿಚಾರ ಬೆಳಕಿಗೆ ಬರ್ತಿದ್ದಂತೇ ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ‘ರಿಹಾ ಚಕ್ರಬರ್ತಿ ಕೊಲೆಗಾತಿ. ಆಕೆ ನನ್ನ ಮಗನಿಗೆ ಸಾಕಷ್ಟು ಸಮಯದಿಂದ ವಿಷ ಕೊಡುತ್ತಿದ್ದಳು. ಹೀಗಾಗಿ ಆಕೆ ಮತ್ತು ಆಕೆಯ ಸಹಚರರನ್ನು ಅರೆಸ್ಟ್​ ಮಾಡಬೇಕು’ ಅಂತ ಹೇಳಿದ್ದಾರೆ.

ಮತ್ತೊಂದುಕಡೆ ರಿಹಾ ಚಕ್ರಬರ್ತಿಯ ಸಹೋದರ ಶೌವಿಕ್ ಚಕ್ರಬರ್ತಿ ಮತ್ತು ಸುಶಾಂತ್ ಅವರ ಸ್ನೇಹಿತ ಸಿದ್ಧಾರ್ಥ್​ ಪಿಠಾಣಿಯನ್ನು ಸಿಬಿಐ ಅಧಿಕಾರಿಗಳು ಮುಂಬೈನ DRDO ಗೆಸ್ಟ್​ ಹೌಸ್​​ನಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. ಇಡಿ ಅಧಿಕಾರಿಗಳು ರಿಹಾ ಚಕ್ರಬರ್ತಿಯ ತಂದೆ ಇಂದ್ರಜಿತ್ ಚಕ್ರಬರ್ತಿಗೆ ಡ್ರಿಲ್ ಮಾಡ್ತಿದ್ದಾರೆ.

-masthmagaa.com
Contact Us for Advertisement

Leave a Reply