ಸೇನೆಯಲ್ಲಿ 35 ಸಾವಿರ ಹುದ್ದೆ ಖಾಲಿ..ಆದ್ರೂ ಯಾರಿಗೂ ಸಿಗಲ್ಲ ಕೆಲ್ಸ..!

ಭಾರತದ ಸೇನೆಗೆ ಮೂರು ವಸ್ತುಗಳು ತುಂಬಾನೇ ಮುಖ್ಯ. ಇವುಗಳಿಂದ ಯಾವುದೇ ಕಾರ್ಯಾಚರಣೆಯ ರೂಪುರೇಷೆ ಸಿದ್ಧಪಡಿಸಬಹುದು. ಯಾವುದೇ ಪ್ರಕರಣವನ್ನು ಇತ್ಯರ್ಥಗೊಳಿಸಬಹುದು. ಮಾದಕ ವಸ್ತುಗಳ ಸ್ಮಗ್ಲಿಂಗ್ ಅನ್ನು ಸಂಪೂರ್ಣವಾಗಿ ತಡೆಯಬಹುದು. ಅಲ್ಲದೆ ಯೋಧರ ಪ್ರಾಣವನ್ನೂ ಉಳಿಸಬಹುದು.. ಹೀಗಂತ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ವಿವೇಕ್ ಬಾರಧ್ವಜ್ ಹೇಳಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಮೂರು ದಿನಗಳ ಇಂಡಿಯಾ ಇಂಟರ್ ನ್ಯಾಷನಲ್ ಸೆಕ್ಯೂರಿಟಿ ಎಕ್ಸ್‍ಪೋದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಭಾರತೀಯ ಸೇನೆಗೆ ಮೂರು ವಸ್ತುಗಳ ಅಗತ್ಯವಿದೆ. ಅದೇ ಉಪಗ್ರಹ, ಡ್ರೋನ್ ಮತ್ತು ನಾಯಿಗಳು. ಈಗಾಗಲೇ ಡ್ರೋನ್ ಮತ್ತು ಉಪಗ್ರಹಗಳ ಸಹಾಯದಿಂದ ಹಲವು ಕಾರ್ಯಾಚರಣೆ ನಡೆಸಿದ್ದೇವೆ. ಉಪಗ್ರಹ ಮತ್ತು ಡ್ರೋನ್ ಮೂಲಕ ಕಾರ್ಯಾಚರಣೆಗೆ ಸರಿಯಾದ ರೀತಿಯಲ್ಲಿ ರೂಪುರೇಷೆ ಸಿದ್ಧಪಡಿಸಬಹುದು ಎಂದಿದ್ದಾರೆ. ಅಲ್ಲದೆ ದೇಶದ ಸುರಕ್ಷತೆಗೆ ನಾಯಿಗಳ ಅಗತ್ಯತೆಯೂ ತುಂಬಾ ಇದೆ. ನಾಯಿಗಳು ಸೇನೆಯ ಬೆಸ್ಟ್ ಫ್ರೆಂಡ್ ಎನ್ನಬಹುದು. ಭಾರತೀಯ ಸೇನೆಯ ಕೆ-9 ತಂಡದಲ್ಲಿ ಸ್ನಿಫರ್ಸ್ ನಾಯಿಗಳು ಇರುತ್ತವೆ. ಅವುಗಳ ಸಹಾಯದಿಂದಲೇ ಹಲವಾರು ಉಗ್ರ ದಾಳಿಗಳನ್ನು ತಡೆಯಲಾಗಿದೆ. ಆದ್ರೆ ಇನ್ನೂ 35 ಸಾವಿರ ನಾಯಿಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

Contact Us for Advertisement

Leave a Reply