ನೀಟ್-2020ರ ಫಲಿತಾಂಶ ಪ್ರಕಟ.. ದಾಖಲೆ ಬರೆದ ಒಡಿಶಾ ಹುಡುಗ

masthmagaa.com:

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) 2020ರ NEET ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಒಡಿಶಾದ ಶೋಯೆಬ್ ಅಫ್ತಾಬ್ ದೇಶಕ್ಕೆ ನಂಬರ್ 1 ಆಗಿ ಹೊರ ಹೊಮ್ಮಿದ್ದಾರೆ. 18 ವರ್ಷದ ಶೋಯೆಬ್ ಅಫ್ತಾಬ್ 720 ಅಂಕಗಳಿಗೆ 720 ಅಂಕ ಸ್ಕೋರ್  ಮಾಡಿ ದಾಖಲೆ ಬರೆದಿದ್ದಾರೆ ಅಂತ ಇಂಡಿಯಾ ಟುಡೆ ವರದಿ ಮಾಡಿದೆ.

ಪರೀಕ್ಷೆ ಬರೆದ ಅಭ್ಯರ್ಥಿಗಳು ntaneet.nic.in ವೆಬ್​ಸೈಟ್​ನಲ್ಲಿ ಫಲಿತಾಂಶವನ್ನು ನೋಡಬಹುದು. ಇದಕ್ಕಾಗಿ ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್ ಮತ್ತು ಜನ್ಮ ದಿನಾಂಕವನ್ನು ಹಾಕಬೇಕಿದೆ. ರಿಸಲ್ಟ್ ಅನೌನ್ಸ್ ಮಾಡುವುದಕ್ಕೂ ಮೊದಲು NTA ಕೀ ಆನ್ಸರ್​ಗಳನ್ನ ಬಿಡುಗಡೆ ಮಾಡಿತ್ತು.

ಕೊರೋನಾ ಹಾವಳಿ ನಡುವೆಯೇ ಕಳೆದ ತಿಂಗಳು ನೀಟ್​ ಪರೀಕ್ಷೆ ನಡೆದಿತ್ತು. ಕೊರೋನಾ ಸೋಂಕಿತರಿಗೆ ಅಕ್ಟೋಬರ್​ 14ರಂದು ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಎರಡು ಹಂತದಲ್ಲಿ ನಡೆದ ಪರೀಕ್ಷೆಗಳ ಫಲಿತಾಂಶವನ್ನು ಇಂದು ಘೋಷಿಸಲಾಗಿದೆ.

-masthmagaa.com

Contact Us for Advertisement

Leave a Reply