ಅತ್ಯಾಚಾರ ಆರೋಪಿ ಸಂದೀಪ್‌ ಲಾಮಿಚಾನೆ ನೇಪಾಳ ಕ್ರಿಕೆಟ್ ತಂಡಕ್ಕೆ ಎಂಟ್ರಿ!

masthmagaa.com:

ಅಪ್ರಾಪ್ತ ಬಾಲಕಿ ಮೇಲೆ ಆತ್ಯಾಚಾರ ಮಾಡಿದ ಆರೋಪ ಎದುರಿಸ್ತಿರೊ ನೇಪಾಳದ ಕ್ರಿಕೆಟ್ ಆಟಗಾರ ಸಂದೀಪ್‌ ಲಾಮಿಚಾನೆ ಅವ್ರನ್ನ ಅಲ್ಲಿನ ಕ್ರಿಕೆಟ್‌ ಬೋರ್ಡ್‌ ತನ್ನ ಟ್ರೈ‌ ಆಂಗ್ಯುಲರ್‌ ಸೀರಿಸ್‌ಗೆ ಸೇರಿಸಿದೆ. ICC ವರ್ಲ್ಡ್‌ ಕಪ್‌ ಲೀಗ್‌ 2 ಟ್ರೈಆಂಗ್ಯುಲರ್‌ ಸೀರಿಸ್‌ನ ಫೈನಲ್‌ 14ರ ಪಟ್ಟಿಯಲ್ಲಿ ಸಂದೀಪ್‌ ಹೆಸರಿದೆ. ಈ ಸೀರಿಸ್‌ನಲ್ಲಿ ನೇಪಾಳ ನಮೀಬಿಯಾ ಹಾಗೂ ಸ್ಕಾಟ್‌ಲ್ಯಾಂಡ್‌ ವಿರುದ್ದ ಆಡಲಿದ್ದು, ಫೆಬ್ರವರಿ 14ರಿಂದ 21ರವರೆಗೆ ಮ್ಯಾಚ್‌ ನಡೆಯಲಿದೆ. ಅಂದ್ಹಾಗೆ ಅತ್ಯಾಚಾರ ಕೇಸ್‌ನಲ್ಲಿ ಜಾಮೀನಿನ ಮೇಲೆ ಹೊರಗಿರುವ ಸಂದೀಪ್‌ ತನಿಖೆಯನ್ನ ಎದುರಿಸ್ತಿದಾರೆ. ಅಲ್ದೇ ಅವರ ಬೇಲ್‌ನ್ನ ಕೂಡ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

-masthmagaa.com

Contact Us for Advertisement

Leave a Reply