ಗೆಳೆಯರ ನೆಟ್‌ಫ್ಲಿಕ್ಸ್‌ ಅಕೌಂಟ್‌ ಯುಸ್‌ ಮಾಡ್ತಿದಾರೆ? ಹಾಗಿದ್ರೆ ಇಲ್ನೋಡಿ

masthmagaa.com:

OTT ಪ್ಲ್ಯಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್‌ ಶೇರಿಂಗ್‌ಗೆ ಕಡಿವಾಣ ಹಾಕೋಕೆ ಮುಂದಾಗಿದೆ. ‘ಪಾಸ್‌ವರ್ಡ್‌ ಶೇರಿಂಗ್‌ ವ್ಯವಸ್ಥೆಯಿಂದ ದೊಡ್ಡ ಸಂಖ್ಯೆಯ ಗ್ರಾಹಕರು ಹಣ ಪಾವತಿಸದೇ ಸೇವೆ ಬಳಸಿಕೊಳ್ತಿದಾರೆ. ಹೀಗಾಗಿ ಇದೇ ವರ್ಷದಲ್ಲಿ ಪಾಸ್‌ವರ್ಡ್‌ ಶೇರಿಂಗ್‌ನ್ನ ಸ್ಥಗಿತಗೊಳಿಸಲಿದ್ದೇವೆʼ ಅಂತ ನೆಟ್‌ಫ್ಲಿಕ್ಸ್‌ನ ನೂತನ ಸಿಇಒಗಳಾದ ಟೆಡ್‌ ಸರಂಡೋಸ್‌, ಗ್ರೆಗ್‌ ಪೀಟರ್‌ ಹೇಳಿದ್ದಾರೆ. ಇದೇ ವೇಳೆ ಬೇರೆ ಅವ್ರಿಗೆ ಪಾಸ್‌ವರ್ಡ್‌ ಶೇರ್‌ ಮಾಡ್ಬೇಕು ಅಂದ್ರೆ ಎಕ್ಸ್‌ಟ್ರಾ ಅಮೌಂಟ್‌ ಪೇ ಮಾಡೋ ಆಪ್ಶನ್‌ ಕೂಡ ಇರುತ್ತೆ ಅಂತ ನೆಟ್‌ಫ್ಲಿಕ್ಸ್‌ ಹೇಳಿದೆ. ಅಂದ್ಹಾಗೆ ತನ್ನ ಪಾಸ್‌ವರ್ಡ್‌ ಹಂಚಿಕೆಯಿಂದ ಕಂಪನಿಯ ಗಳಿಕೆ ಮೇಲೆ ನೆಗಟಿವ್‌ ಪರಿಣಾಮ ಬೀಳ್ತಿದೆ ಅಂತ ನೆಟ್‌ಫ್ಲಿಕ್ಸ್‌ ಈ ಮುಂಚೆಯಿಂದಲೂ ಹೇಳಿಕೊಂಡು ಬಂದಿದೆ. ಒಂದು ನೆಟ್‌ಫ್ಲಿಕ್ಸ್‌ ಅಕೌಂಟ್‌ನಿಂದ ಹಲವಾರು ಜನರು ಕಂಟೆಂಟ್‌ ವೀಕ್ಷಣೆ ಮಾಡುತ್ತಿರೊದ್ರಿಂದ ಕಳೆದ ವರ್ಷ ಚಂದಾದಾರರ ಸಂಖ್ಯೆಯಲ್ಲಿ ಕುಸಿತವನ್ನ ಎದುರಿಸಿತ್ತು. ಹೀಗಾಗಿ ಕಳೆದ ಹಲವು ತಿಂಗಳುನಿಂದ ಈ ಪಾಸ್‌ವರ್ಡ್‌ ಹಂಚಿಕೆಯನ್ನ ಸ್ಟಾಪ್‌ ಮಾಡೋದು ಆಗಾಗ ಸುದ್ದಿಯಾಗ್ತಿತ್ತು. ಆದರೆ ಇದೀಗ ಈ ಬದಲಾವಣೆಯನ್ನ ಈ ವರ್ಷದಿಂದ ಅಧಿಕೃತವಾಗಿ ಜಾರಿಗೆ ತರೋಕೆ ಪ್ಲ್ಯಾನ್‌ ಮಾಡಿದೆ.

-masthmagaa.com

Contact Us for Advertisement

Leave a Reply