ಇರಾನ್‌ ಸರ್ವೋಚ್ಚ ನಾಯಕ ಖಮೇನಿ ವಿರುದ್ದ ಸಿಡಿದು ಬಿದ್ದ ಸೊಸೆ! ಹೇಳಿದ್ದೇನು ಗೊತ್ತಾ?

masthmagaa.com:

ಇರಾನ್​​ನಲ್ಲಿ ಹಿಜಾಬ್ ವಿರುದ್ಧದ ಪ್ರತಿಭಟನೆಗಳು ಮಂದುವರೆದಿದೆ. ಇದರ ನಡುವೆಯೇ ಇರಾನ್‌ನ ಸುಪ್ರೀಂ ಲೀಡರ್‌ ಅಯತುಲ್ಲಾಹ್‌ ಅಲಿ ಖಮೇನಿ ಸೊಸೆ ಫರೀದೆ ಮೊರಾದ್ಭಾನಿ ತಮ್ಮ ಅಂಕಲ್‌ ವಿರುದ್ದವೇ ವಾಗ್ದಾಳಿ ಮಾಡಿದ್ದಾರೆ. ವಿಡಿಯೋ ಒಂದರಲ್ಲಿ ಕಾಣಿಸಿಕೊಂಡಿರೋ ಮೊರಾದ್ಖಾನಿ, ʼಖಮೇನಿ ಹಿಟ್ಲರ್‌ ಮುಸಲೋನಿ, ಸದ್ದಾಂ ಹುಸೇನ್‌, ಗಡಾಫಿ ರೀತಿ ಅಂತ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಈ ಕೂಡಲೇ ಇಡೀ ವಿಶ್ವ ಇರಾನ್‌ ಜೊತೆಗೆ ಎಲ್ಲ ಸಂಬಂಧವನ್ನ ಕಳೆದುಕೊಳ್ಳಬೇಕು. ಇರಾನ್‌ ಸರ್ಕಾರ, ಮಕ್ಕಳ ಹಾಗೂ ಮಹಿಳೆಯರನ್ನ ಸಾಯಿಸಿ ಅಧಿಕಾರ ಮಾಡ್ತಿದೆ. ಇರಾನ್‌ನ ಜನ ಈ ಮುಸ್ಲಿಂ ಆಡಳಿತವನ್ನ ಕಿತ್ತೊಗೆಯಬೇಕು ಅಂತ ಮನವಿ ಮಾಡಿದ್ದಾರೆ. ಈ ವಿಡಿಯೋವನ್ನ ಮೊರಾದ್ಖಾನಿ ಸಹೋದರ ಶೇರ್‌ ಕೂಡ ಮಾಡಿದ್ದು ನವೆಂಬರ್‌ 23 ರಂದು ಈಕೆಯನ್ನ ಬಂಧಿಸಲಾಗಿದೆ ಅಂತ ಹೇಳಿಕೊಂಡಿದ್ದಾರೆ. ಅಂದಹಾಗೆ ಈ ಮೊರಾದ್ಭಖಿ, ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಸಿಸ್ಟರ್, ಬದ್ರಿ‌ಯವರ ಮಗಳು. ಈ ಬದ್ರಿ, 1980ರ ದಶಕದಲ್ಲಿ ಖಮೇನಿ ಕುಟುಂಬದಿಂದ ಓಡಿ ಹೋಗಿ ಬೇರೆ ಮದುವೆಯಾಗಿ ಇರಾಕ್‌ಗೆ ಹೋದ್ರು. ತದನಂತರ ಇರಾನ್‌ನಲ್ಲಿ ಖಮೇನಿ ವಿರೋಧಿಯಾಗಿರೋ ಅಲಿ ತೆಹ್ರಾನ್‌ ಜೊತೆಗೆ ಸೇರಿಕೊಂಡ್ರು. ಅಂದಿನಿಂದ ಈ ಎರಡೂ ಕುಟುಂಬಗಳ ಮದ್ಯೆ ವಾರ್‌ ನಡೀತಿದೆ ಅಂತ ಹೇಳಲಾಗ್ತಿದೆ. ಇನ್ನು 1979 ರ ಇಸ್ಲಾಮಿಕ್ ಕ್ರಾಂತಿಯ ವೇಳೆ ಇದ್ದ ಇರಾನ್‌ನ ರಾಜಾ ಶಾ ಮೊಹಮ್ಮದ್ ರೆಜಾ ಪಹ್ಲವಿಯ ಕುಟುಂಬವನ್ನ ಕೂಡ ಈ ಮರಾದ್ಖಾನಿ ಹೊಗಳಿದ್ರು. ಅದೇ ಕಾರಣಕ್ಕೆ ಅವರನ್ನ ಈ ಮುಂಚೆ ಕೂಡ ಜೈಲಿಗೆ ಹಾಕಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈಗ ಮತ್ತೆ ತಮ್ಮ ಮಾವನ ವಿರುದ್ದ ತಿರುಗಿಬಿದ್ದು ಜೈಲು ಪಾಲಾಗಿದ್ದಾರೆ ಅಂತ ವರದಿಯಾಗಿದೆ. ಇತ್ತ ಹಿಜಬ್ ಧರಿಸದ ಮಹಿಳೆಗೆ ಬ್ಯಾಂಕ್ ಸೇವೆ ನೀಡಿದ‌ ಕಾರಣಕ್ಕಾಗಿ ಇರಾನ್​​ನ ಬ್ಯಾಂಕ್ ಮ್ಯಾನೇಜರ್ ಒಬ್ರನ್ನ ವಜಾ ಮಾಡಲಾಗಿದೆ. ರಾಜಧಾನಿ ಟೆಹ್ರಾನ್ ಬಳಿಯ ಕೋಮ್ ಪ್ರಾಂತ್ಯದ ಬ್ಯಾಂಕ್ ಮ್ಯಾನೇಜರ್ ಒಬ್ಬ ಹಿಜಾಬ್ ಹಾಕದ ಮಹಿಳೆಗೆ ಬ್ಯಾಂಕ್ ಸೇವೆ ಕೊಟ್ಟಿದ್ರು. ಹೀಗಾಗಿ ಸರ್ಕಾರದ ಆದೇಶದ ಮೇರೆಗೆ ಮ್ಯಾನೇಜರ್​​ನ್ನು ಕೆಲಸದಿಂದ ವಜಾಮಾಡಲಾಗಿದೆ ಅಂತ ಮೆಹರ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

-masthmagaa.com

Contact Us for Advertisement

Leave a Reply