ನಿರ್ಮಲಾ ಸೀತಾರಾಮನ್ ಹುಬ್ಬಳ್ಳಿಗೆ ಬಂದಾಗ ಏನಾಯ್ತು ಗೊತ್ತಾ..?

ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರತಿಭಟನೆ ಬಿಸಿ ತಟ್ಟಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಸುಮಾರು 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ನಿರ್ಮಾಲಾ ಸೀತಾರಾಮನ್ ಗೋಬ್ಯಾಕ್ ಎಂದು ಘೋಷಣೆ ಕೂಗಿದ್ರು. ಇದ್ರಿಂದ ಸಚಿವೆ ನಿಮಲಾ ಸೀತಾರಾಮನ್‍ಗೆ ಮುಜುಗರ ಉಂಟಾಯ್ತು. ಹೀಗಾಗಿ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ, ಬಿಡುಗಡೆಗೊಳಿಸಿದ್ರು. ಕೇಂದ್ರ ಸರ್ಕಾರದಿಂದ ಕಡಿಮೆ ಪ್ರಮಾಣದ ಹಣ ಬಿಡುಗಡೆಗೆ ವಿರೋಧಿಸಿ ನಿರ್ಮಲಾ ಸೀತಾರಾಮನ್‍ಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ನಾಯಕರು ಪ್ಲಾನ್ ಮಾಡಿದ್ರು. ಆದ್ರೆ ಪೊಲೀಸರು ಬಂಧಿಸಿದ್ದರಿಂದ ಅದು ಸಾಧ್ಯವಾಗಲಿಲ್ಲ.

Contact Us for Advertisement

Leave a Reply