ಪ್ರವಾಹದ ಬಗ್ಗೆ ನಿತೀಶ್ ಕುಮಾರ್ ಹೇಳಿದ್ದೇನು ಗೊತ್ತಾ..?

ಭಾರಿ ಪ್ರವಾಹಕ್ಕೆ ಇಡೀ ಬಿಹಾರ ಮುಳುಗಿ ಹೋಗ್ತಿದೆ. ಈಗಾಗಲೇ 42 ಮಂದಿ ಜೀವ ಬಿಟ್ಟಿದ್ದಾರೆ. ಆದ್ರೆ ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಿಎಂ ನಿತೀಶ್ ಕುಮಾರ್ ಕೆಂಡಾಮಂಡಲವಾಗಿದ್ದಾರೆ. ನಿತೀಶ್ ಕುಮಾರ್ ಪ್ರವಾಹ ಪೀಡಿತ ಪ್ರದೇಶದಲ್ಲಿ ಹಾನಿಯುಂಟಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕರು ನಿತೀಶ್ ಕುಮಾರ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಇದೇ ಟೈಮಲ್ಲಿ ಮಾಧ್ಯಮದವರು ಪ್ರವಾಹದ ಕುರಿತು ಪ್ರಶ್ನೆ ಕೇಳಿದಾಗ ಫುಲ್ ಸಿಟ್ ಮಾಡ್ಕೊಂಡ್ರು. ಇಡೀ ದೇಶದಲ್ಲಿ, ವಿಶ್ವದಲ್ಲಿ ಎಷ್ಟು ಕಡೆ ಪ್ರವಾಹ ಬಂದಿಲ್ಲ. ಪ್ರವಾಹದಿಂದಾಗಿ ಬಿಹಾರದ ಕೆಲ ಪ್ರದೇಶಗಳು ಜಲಾವೃತವಾಗಿವೆ. ನಮಗೆ ಮಾತ್ರ ಈ ಸಮಸ್ಯೆ ಎದುರಾಗಿದೆಯಾ..? ಅಮೆರಿಕಾದಲ್ಲಿ ಏನಾಯ್ತು..? ಅಲ್ಲಿ ಪ್ರವಾಹ ಬಂದಿಲ್ವಾ ಎಂದು ಹರಿಹಾಯ್ದಿದ್ದಾರೆ. ಪ್ರವಾಹ ಒಂದು ನೈಸರ್ಗಿಕ ವಿಕೋಪ ಎಂದಿರೋ ನಿತೀಶ್ ಕುಮಾರ್, ಅತಿಯಾದ ಮಳೆ ಮತ್ತು ಬರ ಎರಡೂ ವಾಸ್ತವತೆ. ನಾವು ಕೂಡ ಪ್ರವಾಹ ಪೀಡಿತರಿಗೆ ಸೂಕ್ತ ಪರಿಹಾರ ನೀಡಲು ಕೆಲಸ ಮಾಡುತ್ತಿದ್ದೇವೆ ಅಂದ್ರು.

Contact Us for Advertisement

Leave a Reply