SC/ST ವಿರುದ್ದದ ಅಪರಾಧಗಳ FIR ನೊಂದಣಿಯಲ್ಲಿ ಯಾವುದೇ ವಿಳಂಬ ಆಗಬಾರ್ದು: ಕೇಂದ್ರ

masthmagaa.com:

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ವಿರುದ್ದದ ಅಪರಾಧಗಳ FIR ನೊಂದಣಿಯಲ್ಲಿ ಯಾವುದೇ ವಿಳಂಬ ಆಗಬಾರ್ದು ಅಂತ ಕೇಂದ್ರ ಗೃಹ ಇಲಾಖೆ ಎಲ್ಲ ರಾಜ್ಯಗಳಿಗೂ ಸೂಚಿಸಿದೆ. ಅಲ್ಲದೆ ಇಂಥಾ ಕೇಸ್‌ಗಳ ತನಿಖೆಯಲ್ಲಾಗೋ ವಿಳಂಬವನ್ನ ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಬೇಕು. FIR ದಾಖಲಾಗಿ 60 ದಿನಗಳಿಗಿಂತ ಹೆಚ್ಚು ಸಮಯ ಆಗಿದ್ರೆ ತನಿಖೆ ಪ್ರಕ್ರಿಯೆ ತ್ವರಿತಗೊಳಿಸೋಕೆ ವಿಶೇಷ ಡಿಎಸ್‌ಪಿಗಳನ್ನ ನೇಮಿಸಬೇಕು ಅಂತ ಹೇಳಿದೆ.

-masthmagaa.com

Contact Us for Advertisement

Leave a Reply