ಆಕ್ಸಿಜನ್‌ ಇಲ್ಲ! ಏದುಸಿರು ಬಿಡುತ್ತಿದೆ ಕರುನಾಡು!

masthmagaa.com:

ನಿನ್ನೆ ಕರ್ನಾಟಕದ ಚಾಮರಾಜನಗರದಲ್ಲಿ ಕೊರೋನ ರೋಗಿಗಳಿಗೆ ಆಕ್ಸಿಜನ್‌ ಸಿಗದೆ 24 ಜನ ಮೃತಪಟ್ಟಿದ್ರು. ಇದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಮಾನ ಹರಜಾಗಿತ್ತು. ಇದೀಗ ಇದ್ರ ಬೆನ್ನಲ್ಲೆ ಇವತ್ತು ಕಲಬುರಗಿ ಜಿಲ್ಲೆ ಅಫಜಲ್‌ಪುರದಲ್ಲಿ ರೋಗಿಗಳಿಗೆ ಆಕ್ಸಿಜನ್‌ ಸರಿಯಾದ ಸಮಯದಲ್ಲಿ ಸಿಗದೆ 4 ಜನ ಮೃತಪಟ್ಟಿದ್ದಾರೆ. ಬೆಳಗಾವಿಯಲ್ಲೂ ಆಕ್ಸಿಜನ್‌ ಸಿಗದೆ 3 ಕೋವಿಡ್‌ ರೋಗಿಗಳು ಮೃತಪಟ್ಟಿದ್ದಾರೆ. ಅತ್ತ ಹೈದರಾಬಾದ್‌ನ ಹಿಂದೂಪುರದ ಸರ್ಕಾರಿ ಆಸ್ಪತ್ರೆಯಲ್ಲೂ ಕೊರೋನ ರೋಗಿಗಳಿಗೆ ಆಕ್ಸಿಜನ್‌ ಸರಿಯಾದ ಸಮಯದಲ್ಲಿ ದೊರೆಯದೆ 8 ಮಂದಿ ಸಾವನ್ನಪ್ಪಿದ್ದಾರೆ.
ಆದ್ರೆ ಇದರಲ್ಲಿ ಕಲಬುರ್ಗಿಯ ಅಫಜಲ್ಪುರದಲ್ಲಿ ನಿನ್ನೆ ಮೃತಪಟ್ಟವರಲ್ಲಿ ಒಬ್ಬರು ಕೋವಿಡ್‌ ರೋಗಿ ಅಲ್ಲ. ಇನ್ನೊಬ್ಬರು ಆಗಲೇ ತುಂಬಾ ಗಂಭೀರ ಆಗೋಗಿದ್ರು ಅಂತ ಸಂಸದ ಡಾ ಉಮೇಶ್‌ ಜಾದವ್ ಹೇಳಿದ್ದಾರೆ.
ಈ ಮಧ್ಯೆ ಚಾಮರಾಜನಗರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಇಲ್ಲಿ ಆಕ್ಸಿಜನ್ ಇಲ್ಲದೆ ಸಾವನ್ನಪ್ಪಿದ್ದು 24 ಜನ ಅಲ್ಲ.. 28 ಜನ ಅಂತಾ ಆರೋಪಿಸಿದ್ದಾರೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಆರೋಗ್ಯ ಸಚಿವರು ಬರೀ ಮೂರು ಜನ ಅಂತ ಸುಳ್ಳು ಹೇಳ್ತಿದಾರೆ. ಅವರ ಹೇಳಿಕೆಗೂ, ವಾಸ್ತವ ಸ್ಥಿತಿಗೂ ವ್ಯತ್ಯಾಸ ಇದೆ. ಮೃತಪಟ್ಟವರ ಪಟ್ಟಿಯೇ ನಮ್ಮ ಬಳಿ ಇದೆ ಅಂತ ಹೇಳಿದ್ದಾರೆ.
ಇದೇ ವೇಳೆ ಚಾಮರಾಜನಗರ ಜಿಲ್ಲಾಧಿಕಾರಿ ಎಂ ಆರ್ ರವಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ರೋಹಿಣಿ ಸಿಂಧೂರಿ ಮೈಸೂರಿನ ಸದರನ್ ಗ್ಯಾಸ್ ಏಜೆನ್ಸಿಯಿಂದ ಚಾಮರಾಜನಗರಕ್ಕೆ ಬರಬೆಕಾಗಿದ್ದ ಆಕ್ಸಿಜನ್ ಅನ್ನ ತಡೆಹಿಡಿದಿದ್ದೇ ಈ ದುರಂತಕ್ಕೆ ಕಾರಣ ಅಂತಾ ಅವ್ರು ಆರೋಪ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply