ಅಬಿ ಅಹ್ಮದ್‍ಗೆ ನೋಬೆಲ್ ಪ್ರಶಸ್ತಿ..! ಯಾಕೆ ಗೊತ್ತಾ..?

ಇಥಿಯೋಪಿಯಾ ಪ್ರಧಾನಿ ಅಬಿ ಅಹ್ಮದ್ ಅವರಿಗೆ ನೋಬೆಲ್ ಶಾಂತಿ ಪುರಸ್ಕಾರ ಸಿಕ್ಕಿದೆ. ಇಥಿಯೋಪಿಯಾದ ಚಿರಶತ್ರು ಎರಿಟ್ರಿಯಾ ಜೊತೆಗಿನ ಶತ್ರುತ್ವವನ್ನು ಬಗೆಹರಿಸಿ, ಶಾಂತಿಯನ್ನು ಸ್ಥಾಪಿಸಿದ್ದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಬಗ್ಗೆ ಮಾತನಾಡಿದ ನೋಬೆಲ್ ಪ್ರಶಸ್ತಿ ತೀರ್ಪುಗಾರರು, ಶಾಂತಿ ಮತ್ತು ಅಂತಾರಾಷ್ಟ್ರೀಯ ಸಹಯೋಗಕ್ಕಾಗಿ, ಅದರಲ್ಲೂ ಪಕ್ಕದ ಎರಿಟ್ರಿಯಾ ಜೊತೆಗಿನ ಗಡಿ ಸಂಘರ್ಷವನ್ನು ಶಾಂತಿಯುತವಾಗಿ ಬಗೆಹರಿಸಿಕೊಂಡಿದ್ದಕ್ಕೆ ಅಬಿಯವರಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದಿದ್ದಾರೆ.

2018ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅಬಿ ಅಹ್ಮದ್ ರಾಜಕೀಯದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ರು. ಅಲ್ಲದೆ ತಮ್ಮ ದೇಶದ ಮಂತ್ರಿ ಮಂಡಲದಲ್ಲಿ 20ರಲ್ಲಿ 10 ಮಂದಿ ಮಹಿಳೆಯರಿದ್ದಾರೆ. ಅವರಲ್ಲಿ ದೇಶದ ಮೊದಲ ಮಹಿಳಾ ರಕ್ಷಣಾ ಮಂತ್ರಿ ಕೂಡ ಸೇರಿದ್ದಾರೆ. ನಂತರ ಸಿದ್ಧಾಂತದ ಆಧಾರದಲ್ಲಿ ಬಹಳ ದೀರ್ಘ ಕಾಲದಿಂದ ಅಸ್ತಿತ್ವದಲ್ಲಿದ್ದ ಗಡಿ ಸಮಸ್ಯೆಯನ್ನು ಶಾಂತಿಯುವಾಗಿ ಬಗೆಹರಿಸಿದ್ರು.

Contact Us for Advertisement

Leave a Reply