ಹೆಲ್ಮೆಟ್ ಹಾಕದ್ದಕ್ಕೆ ಬಸ್ ಮಾಲೀಕನಿಗೆ ದಂಡ..!

ಕೇಂದ್ರ ಮೋಟಾರು ಕಾಯ್ದೆ(ತಿದ್ದುಪಡಿ) ಜಾರಿಗೆ ಬಂದ ಬಳಿಕ ಒಂದರ ಮೇಲೊಂದು ವಿಚಿತ್ರ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಈಗ ಬಸ್ ಡ್ರೈವರ್ ಹೆಲ್ಮಟ್ ಹಾಕಿಲ್ಲ ಅನ್ನೋ ಕಾರಣಕ್ಕೆ ಬಸ್ ಮಾಲೀಕನಿಗೆ ದಂಡ ವಿಧಿಸಲಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಈ ಘಟನೆ ನಡೆದಿದೆ. ನಿರಾಂಕಾರ್ ಸಿಂಗ್ ಎಂಬುವರಿಗೆ ಸೆಪ್ಟೆಂಬರ್ 11ರಂದೇ ದಂಡ ವಿಧಿಸಲಾಗಿದ್ದು, ತಡವಾಗಿ ಗೊತ್ತಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ನಾನು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಅಗತ್ಯವಿದ್ದರೆ ಕೋರ್ಟ್ ಮೊರೆ ಹೋಗಲು ಸಿದ್ಧನಿದ್ದೇನೆ ಅಂದ್ರು. ಸಾರಿಗೆ ಇಲಾಖೆ ಅಧಿಕಾರಿಗಳು ಹೀಗೆ ಮಾಡಿದ್ರೆ ಹಲವು ಪ್ರಶ್ನೆಗಳು ಮೂಡುತ್ತವೆ. ಅಲ್ಲದೆ ಇಂಥಹ ಅನಗತ್ಯ ಚಲನ್‍ಗಳನ್ನು ನೀಡುವ ಮೂಲಕ ಸಾರ್ವಜನಿಕರಲ್ಲಿ ಆಶ್ಚರ್ಯ ಹಾಗೂ ಆತಂಕವನ್ನು ಹುಟ್ಟುಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸಾರಿಗೆ ಅಧಿಕಾರಿಗಳನ್ನು ಕೇಳಿದ್ರೆ, ಈ ಕುರಿತು ಪರಿಶೀಲಿಸಲಾಗುತ್ತಿದೆ, ದೋಷವಾಗಿದ್ದರೆ ಸರಿಪಡಿಸಲಾಗುವುದು ಎಂದಿದ್ದಾರೆ.

Contact Us for Advertisement

Leave a Reply