ಕಡೆಗೂ ಹಾಟ್‌ಲೈನ್ಗೆ ಬಂದ ಕಿಮ್‌ ಜಾಂಗ್‌ ಉನ್

masthmagaa.com:

ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡ್ಕೊಂಡು, ಸಂಬಂಧ ಸುಧಾರಿಸಲು ಪ್ಲಾನ್ ಮಾಡಿವೆ. ಹೀಗಾಗಿ ಹಲವು ಸಮಯದಿಂದ ಕಡಿದುಕೊಂಡಿದ್ದ ಹಾಟ್​​ಲೈನ್ ಸಂಪರ್ಕ ವ್ಯವಸ್ಥೆಯನ್ನು ಪುನರ್​ ಸ್ಥಾಪಿಸಿದೆ. ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜಾಯ್ ಇನ್ ಮತ್ತು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಏಪ್ರಿಲ್​ನಿಂದ ಹಲವು ಪತ್ರಗಳ ವಿನಿಮಯ ಮಾಡ್ಕೊಂಡಿದ್ದಾರೆ. ಅದರಂತೆ ಈಗ ಹಾಟ್​ಲೈನ್ ರೀ ಕನೆಕ್ಟ್​ ಮಾಡೋಕೆ ನಿರ್ಧರಿಸಲಾಗಿದೆ. ಮೂನ್ ಮತ್ತು ಕಿಮ್ ನಡುವಿನ ಒಪ್ಪಂದದಂತೆ ಉಭಯದೇಶಗಳ ನಡುವಿನ ಎಲ್ಲಾ ರೀತಿಯ ಸಂಪರ್ಕ ವ್ಯವಸ್ಥೆ ಮತ್ತೆ ಶುರುವಾಗಲಿದೆ ಅಂತ ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮ ಕೆಸಿಎನ್​ಎ ಕೂಡ ವರದಿ ಮಾಡಿದೆ. ಎರಡೂ ದೇಶಗಳು 1950ರಿಂದ 53ರವರೆಗೆ ನಡೆದಿದ್ದ ಕೊರಿಯನ್ ಯುದ್ಧದ ಕದನ ವಿರಾಮದ 68ನೇ ವರ್ಷಾಚರಣೆ ಸಂದರ್ಭದಲ್ಲಿ ಈ ನಿರ್ಧಾರಕ್ಕೆ ಬಂದಿವೆ. 2019ರಲ್ಲಿ ಕಿಮ್ ಜಾಂಗ್ ಉನ್ ಮತ್ತು ಅಮೆರಿಕ ಅಧ್ಯಕ್ಷರ ಡೊನಾಲ್ಡ್​ ಟ್ರಂಪ್ ನಡುವೆ 2ನೇ ಸುತ್ತಿನ ಮಾತುಕತೆಗೆ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜಾಯ್ ಇನ್ ಮಧ್ಯಸ್ಥಿಕೆ ವಹಿಸೋದಾಗಿ ಘೋಷಿಸಿದ್ರು. ಆದ್ರೆ ನಂತರದಲ್ಲಿ ಈ ಮಾತುಕತೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಉಭಯದೇಶಗಳ ನಡುವಿನ ಸಂಬಂಧ ಹದಗೆಟ್ಟಿತ್ತು. ಅದರಂತೆ 2020ರ ಜೂನ್​​ನಲ್ಲಿ ಉತ್ತರ ಕೊರಿಯಾ ದಕ್ಷಿಣ ಕೊರಿಯಾದ ಜೊತೆಗಿನ ಹಾಟ್​ಲೈನ್ ಸಂಪರ್ಕವನ್ನು ಕೂಡ ಕಡಿದುಕೊಂಡಿತ್ತು.

-masthmagaa.com

Contact Us for Advertisement

Leave a Reply