ಉತ್ತರ ಕೊರಿಯಾದಲ್ಲಿ ಕಿಮ್ ಹಾಕುವಂತಹ ಲೆದರ್ ಕೋಟುಗಳು ಬ್ಯಾನ್!

masthmagaa.com:

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಗಾಗ ಹೊಸ ಹೊಸ ಸ್ಟೈಲ್ ಮಾಡ್ತಾನೇ ಇರ್ತಾರೆ. ಈಗ ಜನ ಅವರ ಲೆದರ್ ಕೋಟ್​​​​ನ್ನು ಕಾಪಿ ಮಾಡೋಕೆ ಶುರು ಮಾಡ್ತಿರೋದು ಜಾಸ್ತಿಯಾಗ್ತಿದ್ದು, ಇದರಿಂದ ಕಿಮ್ ಸಾಹೇಬ್ರಿಗೆ ಭಾರಿ ಬೇಜಾರಾಗಿದೆ. ಹೀಗಾಗಿ ಇಡೀ ಉತ್ತರ ಕೊರಿಯಾದಲ್ಲಿ ಕಿಮ್ ಜಾಂಗ್ ಉನ್ ಧರಿಸುವಂತಹ ಲೆದರ್ ಕೋಟ್ ಯಾರೂ ಬಳಸುವಂತಿಲ್ಲ ಅಂತ ಆದೇಶಿಸಲಾಗಿದೆ. ಕಿಮ್ ಜಾಂಗ್​ ಉನ್​​​ಗೆ ಈ ಲೆದರ್ ಜಾಕೆಟ್ ಅಂದ್ರೆ ತುಂಬಾ ಇಷ್ಟ.. 2019ರಲ್ಲಿ ಮೊದಲ ಬಾರಿಗೆ ಕಿಮ್ ಜಾಂಗ್ ಉನ್​​​​, ಈ ರೀತಿ ಜಾಕೆಟ್ ಹಾಕಿಕೊಳ್ಳಲು ಶುರು ಮಾಡಿದ್ರು. ಇದನ್ನು ಕಂಡ ಸ್ವಲ್ಪ ದುಡ್ಡಿರೋ ಜನ ಕಿಮ್​​ಗೆ ಬಕೆಟ್ ಹಿಡಿಯೋಕೋ ಅಥವಾ ಸ್ಟೈಲ್​​ಗೋ ಅದೇ ರೀತಿ ಕೋಟ್ ಧರಿಸಲು ಶುರು ಮಾಡಿದ್ರು. ಆದ್ರೀಗ ಇಂಥಾ ಕೋಟ್​ಗಳನ್ನು ಮಾರೋ ಅಂಗಡಿಗಳನ್ನೇ ಬಂದ್ ಮಾಡಲಾಗಿದ್ದು, ಮಾರಾಟಗಳನ್ನು ತಡೆಯಲು ಫ್ಯಾಷನ್ ಪೊಲೀಸರನ್ನು ನಿಯೋಜಿಸಲಾಗಿದೆ. ಬರೀ ಮಾರಾಟ ಮಾತ್ರ ಬಂದ್ ಮಾಡಿರೋದಲ್ಲ. ಈ ರೀತಿಯ ಕೋಟ್ ಹೊಂದಿರೋರು ಕೂಡ ಅದನ್ನು ಧರಿಸದಂತೆ ತಡೆಯಲಾಗ್ತಿದೆ. ದೇಶದಲ್ಲಿ ಎಲ್ಲರೂ ಈ ರೀತಿ ಲೆದರ್ ಕೋಟ್ ಹಾಕಿದ್ರೆ ತನ್ನ ಶಕ್ತಿ ಕಡಿಮೆಯಾಗುತ್ತೆ ಅನ್ನೋದು ಕಿಮ್ ಜಾಂಗ್ ಉನ್​​ಗೆ ಕಾಡ್ತಿರೋ ಭಯ ಅಂತ ಹೇಳಲಾಗ್ತಿದೆ. ಹೀಗಾಗಿಯೇ ಅಲ್ಲಿನ ಪೊಲೀಸರು, ದೇಶದ ಮುಖ್ಯ ನಾಯಕನ ರೀತಿ ಬಟ್ಟೆ ಧರಿಸೋದು ಅವರ ಅಧಿಕಾರಕ್ಕೆ ಸವಾಲೆಸೆದಂತೆ.. ಅದು ತಪ್ಪು ಅಂತ ಹೇಳ್ತಿದ್ದಾರೆ.

-masthmagaa.com

Contact Us for Advertisement

Leave a Reply