ಉತ್ತರ ಕೊರಿಯಾ ಯೋಧರಿಂದ ಖತರ್ನಾಕ್ ಸ್ಟಂಟ್ಸ್​!

masthmagaa.com:

ಒಂದ್ಕಡೆ ಉತ್ತರ ಕೊರಿಯಾದಲ್ಲಿ ಗಡಿ ಬಂದ್​, ಪರಮಾಣು ವಿಚಾರವಾಗಿ ನಿರ್ಬಂಧ ಸೇರಿದಂತೆ ಹಲವು ಕಾರಣಗಳಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಇದ್ರ ನಡುವೆಯೇ ಉತ್ತರ ಕೊರಿಯಾ ಯೋಧರು ಭಯಾನಕ ಮತ್ತು ಖತರ್ನಾಕ್ ರೀತಿಯ ಸಾಹಸ ಪ್ರದರ್ಶನ ನಡೆಸಿದ್ದಾರೆ. ಇಬ್ಬರು ಸೈನಿಕರು ಕೈಲಿ ಇಟ್ಟಿಗೆ ಹಿಡ್ಕೊಂಡಿದ್ರೆ ಮತ್ತೋರ್ವ ಯೋಧ ಹೋಗಿ ಇಟ್ಟಿಗೆಗೆ ತನ್ನ ತಲೆ ಡಿಕ್ಕಿ ಹೊಡೆಯೋದು, ಕೈಯಲ್ಲಿ ಹೆಂಚು ಒಡೆಯೋದು, ಉದ್ದುದ್ದವಾದ ದೊಣ್ಣೆಗಳಿಂದ ಯೋಧನೊಬ್ಬ ಏಟು ತಿನ್ನೋದು, ಗಾಜಿನ ಚೂರುಗಳ ಮೇಲೆ ಮಲಗೋದು, ಹೊಟ್ಟೆಯ ಮೇಲೆ ಕಲ್ಲು ಇಟ್ಟು ಸುತ್ತಿಗೆಯಿಂದ ಹೊಡೆಯೋದು.. ಹೀಗೆ ಒಂದಲ್ಲಾ ಎರಡಲ್ಲಾ.. ಒಂದಕ್ಕಿಂತ ಒಂದು ಭಯಾನಕವಾದ ಸ್ಟಂಟ್​ಗಳನ್ನು ಮಾಡಿದ್ದಾರೆ. ಇದನ್ನೆಲ್ಲಾ ಖುಷ್ ಖುಷಿಯಾಗಿ ನೋಡ್ತಿದ್ದ ಕಿಮ್ ಜಾಂಗ್ ಉನ್ ಚಪ್ಪಾಳೆ ತಟ್ಟಿದ್ದಾರೆ. ಇವೆಲ್ಲದ್ರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆದ್ರೆ ಇದೆಲ್ಲಾ ಪುರಾತನ ಕಾಲಕ್ಕೆ ಆಗೋಯ್ತು. ಯಾಕಂದ್ರೆ ಈಗ ಯೋಧರು ಗಟ್ಟಿಯಾಗಿರಬೇಕು ಅನ್ನೋದಕ್ಕಿಂತ ಅವರ ಕೈಲಿರೋ ಶಸ್ತ್ರಾಸ್ತ್ರಗಳನ್ನು ಚಲಾಯಿಸುವಲ್ಲಿ ಸ್ಟ್ರಾಂಗ್ ಆಗಿರಬೇಕು.. ಅದು ಬಿಟ್ಟು ಈ ರೀತಿ ದೇಹ ಗಟ್ಟಿ ಮಾಡಿಕೊಂಡುಹೋದ್ರೆ ನಡೆಯಲ್ಲ. ಯಾಕಂದ್ರೆ ಶತ್ರು ಪಡೆ ಯುದ್ಧಕ್ಕೆ ಸುತ್ತಿಗೆ, ಇಟ್ಟಿಗೆ ಹಿಡಿದುಕೊಂಡು ಬರಲ್ಲ. ಬದಲಿಗೆ ಬಂದೂಕು, ಸ್ಫೋಟಗಳನ್ನು ಹಿಡ್ಕೊಂಡು ಬರ್ತಾರೆ ಅನ್ನೋದನ್ನ ಈ ಯೋಧರು ನೆನಪಿಡಬೇಕಾಗುತ್ತೆ.

-masthmagaa.com

Contact Us for Advertisement

Leave a Reply