ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ: ಭದ್ರತಾ ಮಂಡಳಿ ರಹಸ್ಯ ಸಭೆ

masthmagaa.com:

ಈ ವಾರದಲ್ಲಿ ಉತ್ತರ ಕೊರಿಯಾ ಎರಡೆರಡು ಕ್ಷಿಪಣಿ ಪರೀಕ್ಷೆ ನಡೆಸಿದ್ದು, ಈ ಸಂಬಂಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಹಸ್ಯ ಸಭೆ ನಡೆದಿದೆ. ಮುಚ್ಚಿದ ಕೋಣೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಸಭೆಯಲ್ಲಿ ಯಾವುದೇ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಜಂಟಿ ಹೇಳಿಕೆ ಕೂಡ ಬಿಡುಗಡೆ ಮಾಡಿಲ್ಲ. ಅಮೆರಿಕ, ಫ್ರಾನ್ಸ್​ ಮತ್ತು ಬ್ರಿಟನ್ ಒತ್ತಾಯದ ಮೇರೆಗೆ ಈ ಸಭೆ ಕರೆಯಲಾಗಿತ್ತು. ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆ ಕುರಿತು ಸಾರ್ವಜನಿಕವಾಗಿ ಹೇಳಿಕೆ ಬಿಡುಗಡೆ ಮಾಡಬೇಕು ಅನ್ನೋದು ಫ್ರಾನ್ಸ್ ಒತ್ತಾಯವಾಗಿತ್ತು. ಆದ್ರೆ ಯಾವುದೇ ಹೇಳಿಕೆ ಬಿಡುಗಡೆ ಮಾಡಲು ಇದು ಸರಿಯಾದ ಸಮಯವಲ್ಲ. ಪರಿಸ್ಥಿತಿಯನ್ನು ಅನಾಲೈಜ್ ಮಾಡೋಕೆ ಇನ್ನೂ ಟೈಂ ಬೇಕು ಅಂತ ರಷ್ಯಾ ಮತ್ತು ಚೀನಾ ಅಡ್ಡಗಾಲು ಹಾಕಿತು ಅಂತ ಮಾಹಿತಿ ಲಭ್ಯವಾಗಿದೆ. ಅಂದಹಾಗೆ ಮಂಗಳವಾರ ಹೈಪರ್​ಸೋನಿಕ್ ಕ್ಷಿಪಣಿ ಪರೀಕ್ಷೆ ನಡೆಸಿದ್ದ ಉತ್ತರ ಕೊರಿಯಾ, ಗುರುವಾರ ಆ್ಯಂಟಿ ಏರ್​ಕ್ರಾಫ್ಟ್​ ಕ್ಷಿಪಣಿಯ ಪರೀಕ್ಷೆ ನಡೆಸಿತ್ತು.

-masthmagaa.com

Contact Us for Advertisement

Leave a Reply