ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಹುಷಾರಿಲ್ಲ! ಕೊರೋನ ಬಂತಾ?

masthmagaa.com:

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಹುಷಾರಿಲ್ಲ. ಅಧಿಕಾರಿಗಳೊಂದಿಗೆ ನಡೆದ ಸಭೆ ವೇಳೆ ಇದು ಬಹಿರಂಗ ಆಗಿದೆ. ಈ ಮೀಟಿಂಗ್ ಟಿವಿಯಲ್ಲಿ ನೇರ ಪ್ರಸಾರ ಆಗ್ತಿತ್ತು. ಪುಟಿನ್ ಸಾಹೇಬ್ರು ಪದೇ ಪದೇ ಕೆಮ್ತಿದ್ರು. ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಸೂಪರ್ ಅಂತ ಮಾರ್ಕೆಟಿಂಗ್ ಮಾಡ್ತಿದ್ದ ಪುಟಿನ್ಗೇ ಕೊರೋನ ಬಂತಾ ಹೇಗೆ ಅಂತ ಎಲ್ಲರೂ ಅನುಮಾನಗೊಳ್ಳುವಷ್ಟು ಕೋಲ್ಡ್-ಕಾಫ್ ಆಗಿತ್ತು. ಎಲ್ಲರೂ ಅದೇ ಅನುಮಾನದಿಂದ ಅವರತ್ತ ನೋಡಿದಾಗ ಅದನ್ನ ಅರಿತ ಪುಟಿನ್, ‘ಏನೂ ಚಿಂತೆ ಮಾಡಬೇಡಿ. ನಂಗೆ ಕೊರೋನ ಬಂದಿಲ್ಲ. ನಂಗೆ ಕೊರೋನ ಸೇರಿದಂತೆ ಎಲ್ಲ ಬಗೆಯ ಇನ್ಫೆಕ್ಷನ್ ಗಳ ಟೆಸ್ಟ್‌ಗಳನ್ನ ದಿನವೂ ಮಾಡ್ತಾರೆ. ಎಲ್ಲವೂ ನಾರ್ಮಲ್ ಇದೆ. ಡೋಂಟ್ ವರಿ’ ಅಂದಿದ್ದಾರೆ. ನಾನು ಸ್ವಲ್ಪ ತಂಗಾಳಿಯಲ್ಲಿ ಓಡಾಡಿದೆ. ಅದ್ಕೆ ಸ್ವಲ್ಪ ಕೋಲ್ಡ್ ಅಷ್ಟೆ. ಭಯಾನಕ ಕಾಯಿಲೆಯೇನೂ ಬಂದಿಲ್ಲ ನಂಗೆ’ ಅಂತ ನಕ್ಕಿದ್ದಾರೆ.

-masthmagaa.com

Contact Us for Advertisement

Leave a Reply