ಜಮ್ಮು ಕಾಶ್ಮೀರದಲ್ಲಿ ಉಗ್ರನ ನಾಟಕೀಯ ಶರಣಾಗತಿ..!

masthmagaa.com:

ಜಮ್ಮು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕನೊಬ್ಬ ನಾಟಕೀಯ ರೀತಿಯಲ್ಲಿ ಶರಣಾಗಿದ್ದಾನೆ.  ಸುಮಾರು 20 ವರ್ಷದ ಈ ಯುವಕ ಇತ್ತೀಚೆಗಷ್ಟೇ ಭಯೋತ್ಪಾದಕನಾಗಿದ್ದ ಅಂತ ತಿಳಿದು ಬಂದಿದೆ. ಅಕ್ಟೋಬರ್ 13ರಂದು ವಿಶೇಷ ಪೊಲೀಸ್ ಅಧಿಕಾರಿಯೊಬ್ಬರು 2 ಎಕೆ 47 ರೈಫಲ್​​ಗಳ ಜೊತೆ ನಾಪತ್ತೆಯಾಗಿದ್ರು. ಅದೇ ದಿನ ಚೌರಾಹಾ ಪ್ರದೇಶದಿಂದ ಜಹಾಂಗೀರ್ ಶಾ ಭಟ್ ಎಂಬ ಯುವಕ ಕೂಡ ನಾಪತ್ತೆಯಾಗಿರುವ ಬಗ್ಗೆ ಸುದ್ದಿ ಬಂತು. ನಂತರ ಯೋಧರು ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆ ವೇಳೆ ಜಹಾಂಗೀರ್ ಭಟ್ ಪತ್ತೆಯಾಗಿದ್ದಾನೆ. ಆಗ ಯೋಧರ ಸೂಚನೆ ಮೇರೆಗೆ ಜಹಾಂಗೀರ್ ಶರಣಾಗಿದ್ದಾನೆ ಅಂತ ಸೇನೆ ಮಾಹಿತಿ ನೀಡಿದೆ.

ಈ ಬಗ್ಗೆ ಸೇನೆ ವಿಡಿಯೋವೊಂದನ್ನು ಕೂಡ ರಿಲೀಸ್ ಮಾಡಿದೆ. ಅದರಲ್ಲಿ ಮೊದಲಿಗೆ ಉಗ್ರ ಕೈ ಮೇಲೆ ಮಾಡಿಕೊಂಡು ಶರಣಾಗುತ್ತಾ ಬಂದಿದ್ದು, ಆಗ ಯೋಧರೊಬ್ಬರು ಯಾರೂ ಗುಂಡು ಹಾರಿಸಬೇಡಿ ಅಂತ ಹೇಳಿದ್ದಾರೆ.. ಜೊತೆಗೆ ಉಗ್ರನನ್ನು ಕುರಿತು ಮಾತನಾಡಿರುವ ಯೋಧರು, ಬಾ..ನಿನಗೆ ಏನೂ ಆಗೋದಿಲ್ಲ.. ಏ ಯಾರಾದ್ರೂ ನೀರು ತಂದು ಕೊಡ್ರೋ ಅಂತ ಹೇಳಿದ್ದಾರೆ.. ಅಲ್ಲದೆ ಬಂಧಿತನಿಂದ ಒಂದು ಎಕೆ-47 ರೈಫಲ್ ಕೂಡ ವಶಕ್ಕೆ ಪಡೆಯಲಾಗಿದೆ. ಇದಾದ ಬಳಿಕ ಅಲ್ಲಿಗೆ ಬಂದ ಯುವಕನ ತಂದೆ ಯೋಧರಿಗೆ ಧನ್ಯವಾದ ತಿಳಿಸಿದ್ದಾರೆ. ಆಗ ಯೋಧರು ಕೂಡ ಮತ್ತೊಮ್ಮೆ ನಿಮ್ಮ ಮಗನನ್ನು ಉಗ್ರರ ಜೊತೆ ಹೋಗಲು ಬಿಡಬೇಡಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply