ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ಧಿ! ಇನ್ಮುಂದೆ ವಾಟ್ಸ್‌ಆಪ್‌ನಲ್ಲೇ ಫುಡ್‌ ಆರ್ಡರ್‌ ಮಾಡಬಹುದು!

masthmagaa.com:

ರೈಲ್ವೆ ಪ್ರಯಾಣಿಕರು ಇನ್ಮುಂದೆ ಪ್ರಯಾಣದ ಮಧ್ಯೆ ತಮಗೆ ಬೇಕಾದ ಆಹಾರವನ್ನ ವಾಟ್ಸ್‌ಆಪ್‌ ಮೂಲಕ ಆರ್ಡ್‌ರ್‌ ಮಾಡ್ಬೋದು. ಭಾರತೀಯ ರೈಲ್ವೆಯ IRCTCಯು ಇ-ಕೇಟರಿಂಗ್‌ ಸೇವೆಯನ್ನ ವಾಟ್ಸ್‌ಆಪ್‌ ಮೂಲಕ ಪ್ರಾರಂಭಿಸಿದೆ. ಇದಕ್ಕಾಗಿ 91-8750001323 ಬ್ಯುಸಿನೆಸ್‌ ವಾಟ್ಸ್‌ಆಪ್‌ ನಂಬರ್‌ನ್ನ ಸ್ಟಾರ್ಟ್‌ ಮಾಡಿದೆ. ಇನ್ನು ಇ-ಕೇಟರಿಂಗ್‌ ಅನ್ನ ಸದ್ಯಕ್ಕೆ ಕೆಲವು ರೈಲುಗಳಲ್ಲಿ ಮಾತ್ರ ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಬೇರೆ ರೈಲುಗಳಿಗೂ ವಿಸ್ತರಿಸಲಾಗುತ್ತೆ ಅಂತ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಟ್ರೇನ್‌ ಟಿಕೆಟ್‌ ಬುಕ್‌ ಮಾಡೋ ವೇಳೆ ಪ್ರಯಾಣಿಕರಿಗೆ ವಾಟ್ಸ್ಆಪ್‌ ನಂಬರ್‌ನಿಂದ ಒಂದು ಲಿಂಕ್‌ ಅನ್ನ ಕಳಿಸಲಾಗುತ್ತೆ. ಆ ಲಿಂಕ್‌ ಓಪನ್‌ ಮಾಡೋ ಮೂಲಕ ಫುಡ್‌ ಆರ್ಡರ್‌ ಮಾಡ್ಬೋದು ಅಂತ ರೈಲ್ವೆ ಇಲಾಖೆ ತಿಳಿಸಿದೆ.

-masthmagaa.com

Contact Us for Advertisement

Leave a Reply