ಕಾಶ್ಮೀರ ವಿಚಾರದಲ್ಲಿ ಭಾರತಕ್ಕೆ ಸೌದಿ ಬೆಂಬಲ..ಪಾಕ್‍ಗೆ ಮುಖಭಂಗ..!

ಜಮ್ಮು ಕಾಶ್ಮೀರದ ವಿಚಾರದಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯವಾಗಿ ಬೆಂಬಲ ಸಿಗುತ್ತಲೇ ಇದೆ. ಈಗ ಮುಸ್ಲಿಂ ರಾಷ್ಟ್ರ ಸೌದಿ ರಾಜಕುಮಾರ ಜಮ್ಮು ಕಾಶ್ಮೀರದ ವಿಚಾರದಲ್ಲಿ ಭಾರತದ ಬೆಂಬಲಕ್ಕೆ ನಿಂತಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಜಮ್ಮು ಕಾಶ್ಮೀರದ ವಿಚಾರದಲ್ಲಿ ಭಾರತ ಇಟ್ಟ ಹೆಜ್ಜೆ ಎಷ್ಟು ಮಹತ್ವದ್ದು ಎಂಬುದು ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ಸಲ್ಮಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ರು. ಉಭಯದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ಇಬ್ಬರ ನಡುವೆ ಮಹತ್ವದ ವಿಷಯಗಳ ಚರ್ಚೆ ನಡೆದಿದೆ. ಇದಾದ ಬಳಿಕ ಕಾಶ್ಮೀರದ ವಿಚಾರದಲ್ಲಿ ಸಲ್ಮಾನ್ ಭಾರತದ ಪರ ನಿಂತಿದ್ದಾರೆ. ಇನ್ನೊಂದು ಕಡೆ ಪಾಕ್ ಕೂಡ ಸೌದಿ ಜೊತೆ ಉತ್ತಮ ಸಂಬಂಧ ಕಾಯ್ದುಕೊಳ್ಳಲು ಸರ್ಕಸ್ ಮಾಡ್ತಿದೆ. ಅಲ್ಲದೆ ಕಾಶ್ಮೀರ ವಿಚಾರವನ್ನೂ ಮುಂದಿಟ್ಟು ಸೌದಿ ಜೊತೆ ಚರ್ಚೆ ನಡೆಸಿದೆ. ಇಂತಹ ಟೈಮಲ್ಲಿ ಸೌದಿ ರಾಜಕುಮಾರ ಸಲ್ಮಾನ್ ಕಾಶ್ಮೀರದ ವಿಚಾರವಾಗಿ ಭಾರತದ ಪರ ನಿಂತಿರೋದು ಪಾಕ್ ಮುಖಕ್ಕೆ ಹೊಡೆದಂತಾಗಿದೆ.

Contact Us for Advertisement

Leave a Reply