2028ರ ಅಮೆರಿಕ OLYMPICSಗೆ 6 ಟೀಮ್? ಓಲಿಂಪಿಕ್ಸ್‌ನಲ್ಲಿ ಕ್ರಿಕೆಟ್?

masthmagaa.com:

2028ರ ಲಾಸ್‌ ಏಂಜಲಿಸ್‌ ಓಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರಿಸೋ ಐಸಿಸಿ ಕನಸು ಇನ್ನಷ್ಟು ಹತ್ತಿರ ಆಗ್ತಿದೆ. ಟೆಲಿಗ್ರಾಫ್‌ ಪತ್ರಿಕೆ ವರದಿ ಮಾಡಿರೋ ಪ್ರಕಾರ ಓಲಿಂಪಿಕ್ಸ್‌ಗೆ ಸೇರಿಸೋಕೆ ಈಗ 9 ಕ್ರೀಡೆಗಳು ಶಾರ್ಟ್‌ಲಿಸ್ಟ್‌ ಆಗಿದ್ದು ಅದ್ರಲ್ಲಿ ಕ್ರಿಕೆಟ್‌ ಕೂಡ ಇದೆ. ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಇದು ಫೈನಲ್‌ ಆಗುತ್ತೆ. ಇನ್ನು ಓಲಿಂಪಿಕ್ಸ್‌ಗೆ ಐಸಿಸಿ 6 ತಂಡಗಳ ಟಿ20ಯನ್ನ ಪ್ರಪೋಸ್‌ ಮಾಡಿದೆ ಎನ್ನಲಾಗಿದೆ. ಟೀಂ ಸೈಜ್‌ ದೊಡ್ಡದಾಗ್ಬಾರ್ದು ಅಂತ ಒಂದು ಟೀಂಗೆ 14 ಜನ ಆಟಗಾರರ ಮಿತಿ ಹೇರಿದೆ. ಬೇಗ ಬೇಗ ಆಡಿಸೋಕೆ ಒಂದು ಪುರುಷರ ಪಂದ್ಯ ಆದ ತಕ್ಷಣ ಮಹಿಳೆಯರ ಪಂದ್ಯ ಆಡಿಸಲಾಗುತ್ತೆ. ಇನ್ನು ಈ 6 ತಂಡಗಳನ್ನ ಎರಡು ಗ್ರೂಪ್‌ಗಳಾಗಿ ಡಿವೈಡ್‌ ಮಾಡ್ಬಹುದು, ಟಾಪ್‌ 2 ಸೆಮಿಫೈನಲ್‌ ಆಡ್ಬಹುದು ಎನ್ನಲಾಗಿದೆ. ಅತ್ತ ಇಂಗ್ಲೆಂಡ್‌ ತಂಡ, ಗ್ರೇಟ್‌ ಬ್ರಿಟನ್‌ ಆಗಿ ಅಂದ್ರೆ ಈ ಸ್ಕಾಟ್ಲೆಂಡ್‌, ನಾರ್ದರ್ನ್‌ ಐರ್ಲೆಂಡ್‌ ಆಟಗಾರರನ್ನ ಕೂಡ ಒಳಗೊಂಡಿರುತ್ತೆ ಎನ್ನಲಾಗಿದೆ. ಅತ್ತ ಟಾಪ್‌ 6ನಲ್ಲಿ ಭಾರತ ಇರೋದ್ರಿಂದ ಓಲಿಂಪಿಕ್ಸ್‌ಗು ಕೂಡ ಸೌತ್‌ ಏಷ್ಯಾದಲ್ಲಿ ಒಳ್ಳೇ ಪಾಪುಲಾರಿಟಿ ಸಿಗುತ್ತೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply