ಬಿಲ್ಕಿಸ್‌ ಬಾನೊ ಅತ್ಯಾಚಾರ ಪ್ರಕರಣದ ಅಪರಾಧಿಗಳು ರಿಲೀಸ್‌! ಓವೈಸಿ ಕಿಡಿ

masthmagaa.com:

ಬಿಲ್ಕಿಸ್‌ ಬಾನೊ ಅತ್ಯಾಚಾರದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಅಪರಾಧಿಗಳನ್ನ ಬಿಡುಗಡೆಗೊಳಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ AIMIMನ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಇದು ಒಂದ್‌ ರೀತಿ ಓಲೈಕೆ ರಾಜಕಾರಣ ಅಂತ ಹೇಳಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೆಲವು ಖೈದಿಗಳನ್ನ ಬಿಡುಗಡೆ ಮಾಡಲಾಗಿತ್ತು. ಅದ್ರೆ ಇದರಲ್ಲಿ ಅತ್ಯಾಚಾರದ ಆರೋಪಿಗಳನ್ನ ರಿಲೀಸ್‌ ಮಾಡಲ್ಲ ಅಂತ ಹೇಳಲಾಗಿತ್ತು. ಆದ್ರೆ ಬಿಲ್ಕಿಸ್‌ ಬಾನೊ ಅತ್ಯಾಚಾರದ ಪ್ರಕರಣದಲ್ಲಿ ಈ ಗೈಡ್‌ಲೈನ್‌ಗಳು ಅನ್ವಯಿಸಲ್ವಾ ಅಂತ ಓವೈಸಿ ಕಿಡಿಕಾರಿದ್ದಾರೆ. ಅಂದ್ಹಾಗೆ 2002ರ ಗುಜರಾತ್‌ ಗಲಭೆಯ ಸಮಯದಲ್ಲಿ 5 ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್‌ ಬಾನೊ ಅನ್ನೊ ಮಹಿಳೆ ಮೇಲೆ 11 ಜನ ಸಾಮೂಹಿಕ ಅತ್ಯಾಚಾರ ಮಾಡಿದ್ರು. ಅದೇ ದಿನ ಚಿಕ್ಕ ಮಗು ಸೇರಿ ಆಕೆಯ ಕುಟುಂಬದ 7 ಜನರನ್ನ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ 11 ಆರೋಪಿಗಳಿಗೆ ಮುಂಬೈನ ವಿಶೇಷ ನ್ಯಾಯಾಲಯ 2008ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

-masthmagaa.com

Contact Us for Advertisement

Leave a Reply