ಝೂನಲ್ಲಿ ಸಿಂಹದ ಮುಂದೆ ಹೋದ ಮಹಿಳೆ..! ಆಮೇಲೆ..?

ಪ್ರಾಣಿ ಸಂಗ್ರಹಾಲಯದಲ್ಲಿ ಮಹಿಳೆಯೊಬ್ಬರು ಸೇಫ್ಟಿಗೆ ಹಾಕಲಾದ ಪರದೆ ದಾಟಿ ಹೋಗಿ, ಸಿಂಹದ ಎದುರು ಹುಚ್ಚಾಟ ಮೆರೆದಿದ್ದಾರೆ. ಅಮೆರಿಕಾದ ನ್ಯೂಯಾರ್ಕ್‍ನ ಬ್ರೋಂಕ್ಸ್ ಪ್ರಾಣಿ ಸಂಗ್ರಹಾಲಯದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಿಳೆಯೊಬ್ಬರು ಸೇಫ್ಟಿಗೆ ಹಾಕಲಾದ ಪ್ಯಾಸೇಜ್ ದಾಟಿ ಹೋಗಿದ್ದಾರೆ. ಸಿಂಹದ ಮುಂದೆ ನಿಂತು ಕೈ ತೋರಿಸುತ್ತಾ, ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೆ ಬೇಬಿ ಐ ಲವ್ ಯೂ ಎಂದು ಸಾಂಗ್ ಕೂಡ ಹಾಡಿದ್ದಾರೆ. ಹಾಗೆ ಮಾಡಬೇಡಿ ಎಂದು ಅಲ್ಲಿದ್ದವರೊಬ್ಬರು ಮನವಿ ಮಾಡುತ್ತಲೇ ಇದ್ದರು. ಆದರೂ ಮಹಿಳೆ ಕ್ಯಾರೆ ಎನ್ನದೇ ಸಿಂಹದ ಮುಂದೆ ಹುಚ್ಚಾಟ ತೋರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ, ಮಹಿಯೊಬ್ಬರು ನಿಯಮ ಮೀರಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

https://www.instagram.com/p/B2-wZ4gBf5t/?utm_source=ig_web_copy_link

Contact Us for Advertisement

Leave a Reply