ಜಪಾನ್‌ನಲ್ಲಿ ಮುಂದುವರೆದ ವಯಸ್ಸಾದವ್ರ ಸಮಸ್ಯೆ! ಡೇಟಾ ಏನು ಹೇಳುತ್ತೆ?

masthmagaa.com:

ಜಪಾನ್‌ನಲ್ಲಿ ವಯಸ್ಸಾದವ್ರ ಸಂಖ್ಯೆ ಹೆಚ್ಚಾಗಿರೋದು ಅಲ್ಲಿನ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. 10 ಜನರಲ್ಲಿ ಒಬ್ಬರು 80 ವರ್ಷ ಅಥ್ವಾ ಅದಕ್ಕಿಂತಲೂ ಹೆಚ್ಚಿಗೆ ವಯಸ್ಸಾದವ್ರಿದ್ದಾರೆ. ಹಾಗೇ ಜಾಪನ್‌ನ ಒಟ್ಟು ಜನಸಂಖ್ಯೆಯಲ್ಲಿ 10%ನಷ್ಟು 80 ಕ್ಕಿಂತಲೂ ಹೆಚ್ಚು ವಯಸ್ಸಾದ ಜನರಿದ್ದಾರೆ ಅಂತ ಜಪಾನ್‌ನ ಇಂಟರ್ನಲ್‌ ಅಫೇರ್ಸ್‌ ಮಿನಿಸ್ಟ್ರಿ ಹೇಳಿದೆ. ಈ ಡೇಟಾವನ್ನ ಜಪಾನ್‌ ಸರ್ಕಾರ ವಾರ್ಷಿಕವಾಗಿ Aged Day ಅಥ್ವಾ ವಯಸ್ಸಾದವ್ರ ದಿನದಂದು ರಿಲೀಸ್‌ ಮಾಡುತ್ತೆ. ಜಪಾನ್‌ನಲ್ಲಿ 65 ವರ್ಷಕ್ಕಿಂತಲೂ ವಯಸ್ಸಾದವ್ರ ಪ್ರಮಾಣ ಈ ವರ್ಷ 29.1%ಗೆ ಏರಿಕೆಯಾಗಿದೆ. ಕಡಿಮೆ ಜನನ ದರವನ್ನ ಹೊಂದಿರೊ ಜಪಾನ್‌, ವಿಶ್ವದ ಅತ್ಯಂತ ವಯಸ್ಸಾದ ದೇಶ ಅಂತ ಕರೆಸಿಕೊಂಡಿದೆ. ಒಟ್ಟು 12.44 ಕೋಟಿ ಜನಸಂಖ್ಯೆಯಲ್ಲಿ 1.26 ಕೋಟಿ ಜನ 80 ವರ್ಷ ವಯಸ್ಸಿಗಿಂತ ಅಧಿಕ ಇದ್ರೆ, 2 ಕೋಟಿ ಜನ 75 ವರ್ಷಕ್ಕಿಂತ ಅಧಿಕ ವಯಸ್ಸಿನವರಿದ್ದಾರೆ ಅಂತ ಡೇಟಾ ರಿವೀಲ್‌ ಮಾಡಿದೆ.

-masthmagaa.com

Contact Us for Advertisement

Leave a Reply