ತೆಲಂಗಾಣದಲ್ಲಿ 1 ಕೆಜಿ ಈರುಳ್ಳಿಗೆ ಕೇವಲ 35 ರೂಪಾಯಿ..!

masthmagaa.com:

ಕರ್ನಾಟಕ ಸೇರಿದಂತೆ ದೇಶಾದ್ಯಂತ ಈರುಳ್ಳಿ ಬೆಲೆ ಗಗನಕ್ಕೇರಿದೆ. ಕೆಜಿ ಈರುಳ್ಳಿಗೆ 100 ರೂಪಾಯಿ ದಾಟಿದೆ. ಇಂತಹ ಸಂದರ್ಭದಲ್ಲಿ ತೆಲಂಗಾಣ ಸರ್ಕಾರ ತನ್ನ ಜನತೆಗೆ ಸಬ್ಸೀಡಿ ದರದಲ್ಲಿ ಈರುಳ್ಳಿ ಕೊಡಲು ಮುಂದಾಗಿದೆ. ಇದರ ಪ್ರಕಾರ ಕೆಜಿಗೆ 35 ರೂಪಾಯಿಯಂತೆ ಒಬ್ಬ ವ್ಯಕ್ತಿಗೆ 2 ಕೆಜಿ ಈರುಳ್ಳಿ ಸಿಗಲಿದೆ. ಗ್ರಾಹಕರು ತಮ್ಮ ಐಡಿ ಪ್ರೂಫ್ ತೋರಿಸಿ 70 ರೂಪಾಯಿಗೆ 2 ಕೆಜಿ ಈರುಳ್ಳಿಯನ್ನು ಖರೀದಿಸಬಹುದು.

ಅಂದ್ಹಾಗೆ ತೆಲಂಗಾಣ ಸರ್ಕಾರ ನಡೆಸುವ ‘ರೈತು ಬಝಾರ್’ಗಳಲ್ಲಿ ಮಾತ್ರ ಈ ಆಫರ್ ಲಭ್ಯವಿದೆ. ರಾಜಧಾನಿ ಹೈದ್ರಾಬಾದ್​ನ 11 ರೈತು ಬಝಾರ್​ಗಳಲ್ಲಿ ಇಂದಿನಿಂದಲೇ ಈರುಳ್ಳಿಯನ್ನು ಸಬ್ಸೀಡಿ ದರದಲ್ಲಿ ಮಾರಾಟ ಮಾಡಲಾಗ್ತಿದೆ ಅಂತ ಸರ್ಕಾರ ಪ್ರಕಟಣೆ ಹೊರಡಿಸಿದೆ.

-masthmagaa.com

Contact Us for Advertisement

Leave a Reply