ಜನಗಣತಿಯಲ್ಲಿ 6 ಧರ್ಮಗಳನ್ನ ಮಾತ್ರ ಪರಿಗಣಿಸಲಾಗುತ್ತೆ: ಕೇಂದ್ರ ಸರ್ಕಾರ

masthmagaa.com:

ದೇಶದಲ್ಲಿ ಮುಂದಿನ ಜನಗಣತಿಯನ್ನ ಆರು ಧರ್ಮಗಳನ್ನ ಪರಿಗಣಿಸಿ ನಡೆಸಲಾಗುತ್ತೆ ಅಂತ ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಿಲೀಸ್‌ ಮಾಡಿರುವ ಜನಗಣತಿ ಕುರಿತ ಮಾಹಿತಿಯಿಂದ ತಿಳಿದು ಬಂದಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಸಿಖ್‌ ಮತ್ತು ಜೈನ ಧರ್ಮಗಳನ್ನ ಆಧರಿಸಿ ಮುಂದಿನ ಜನಗಣತಿ ನಡೆಯಲಿದೆ. ಇನ್ನು ಲಿಂಗಾಯತ ಹಾಗೂ ಇತರ ಜಾತಿಗಳಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡ್ಬೇಕು ಅನ್ನೊ ಒತ್ತಡ ಜಾರ್ಖಂಡ್‌, ಛತ್ತೀಸ್‌ಗಡ ಹಾಗೂ ಒಡಿಶಾದಲ್ಲಿ ಕೇಳಿಬಂದಿತ್ತು. ಅಂದ್ಹಾಗೆ ಎರಡು ಹಂತದಲ್ಲಿ ʻಜನಗಣತಿ- 2021ʼ ನಡೆಸಲು ಉದ್ದೇಶಿಸಲಾಗಿತ್ತು. ಆದ್ರೆ ಕೋವಿಡ್‌ ಕಾರಣದಿಂದ ಅನಿರ್ದಿಷ್ಟಾವಧಿಗೆ ಕೇಂದ್ರ ಸರ್ಕಾರ ಮುಂದೂಡಿದೆ.

-masthmagaa.com

Contact Us for Advertisement

Leave a Reply