ಸೇನೆ ವಿರುದ್ಧ ಮೌನ ಪ್ರತಿಭಟನೆಗೆ ಇಳಿದ ಮಯನ್ಮಾರ್ ಜನತೆ

masthmagaa.com:

ಮಯನ್ಮಾರ್​ನಲ್ಲಿ ಕ್ಷಿಪ್ರ ಕ್ರಾಂತಿ ನಡೆಸಿ ಎಲ್ಲವನ್ನ ತನ್ನ ಕಂಟ್ರೋಲ್​​ಗೆ ತೆಗೆದುಕೊಂಡಿರೋ ಮಯನ್ಮಾರ್ ಸೇನೆ ವಿರುದ್ಧ ಪ್ರತಿಭಟನೆ ಮುಂದುವರಿದಿದೆ. ಇಷ್ಟುದಿನ ರಸ್ತೆಗಿಳಿದು ಘೋಷಣೆಗಳನ್ನ ಕೂಗಿ ಸೇನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಪ್ರಜಾಪ್ರಭುತ್ವ ಪರ ಹೋರಾಟಗಾರರು, ಇವತ್ತು ಮೌನ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಫೆಬ್ರವರಿ 1ರಿಂದ ನಡೆಯುತ್ತಿರೋ ಪ್ರತಿಭಟನೆಯಲ್ಲಿ ಇದುವರೆಗೆ 700ಕ್ಕೂ ಹೆಚ್ಚು ಜನರನ್ನ ಸೇನೆ ಕೊಂದು ಹಾಕಿದೆ. ಹೀಗಾಗಿ ಶೋಕಾಚರಣೆಗಾಗಿ ಎಲ್ಲರೂ ಮನೆಯಲ್ಲೇ ಇರಿ ಅಂತ ಪ್ರತಿಭಟನಾಕಾರರು ಕರೆ ಕೊಟ್ಟಿದ್ದಾರೆ. ಒಂದ್ವೇಳೆ ಮನೆಯಿಂದ ಹೊರಬರಬೇಕು ಅಂದ್ರೆ ಕಪ್ಪು ಬಟ್ಟೆಯನ್ನ ತೊಟ್ಟು ಬನ್ನಿ ಅಂತಾನೂ ಆಗ್ರಹಿಸಿದ್ದಾರೆ. ರಸ್ತೆಗಳನ್ನ ಸೈಲೆಂಟ್​ ಆಗಿರಿಸೋಣ, ದಿ ಮೋಸ್ಟ್​ ಸೈಲೆಂಟ್ ವಾಯ್ಸ್ ಈಸ್ ದಿ ಲೌಡೆಸ್ಟ್ ಅಂತೆಲ್ಲಾ ಪ್ರತಿಭಟನೆಯ ನೇತೃತ್ವ ವಹಿಸಿರುವ ನಾಯಕರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply