ಭಾರತದ ವಿಮಾನವನ್ನು 1 ಗಂಟೆ ಹಿಂಬಾಲಿಸಿದ ಪಾಕ್​​ನ ಎಫ್​​-16 ವಿಮಾನ..!

ದೆಹಲಿಯಿಂದ ಅಫ್ಘಾನಿಸ್ಥಾನದ ಕಾಬೂಲ್​​ಗೆ ಹೋಗುತ್ತಿದ್ದ ವಿಮಾನವನ್ನು ಪಾಕ್ ಯುದ್ಧ ವಿಮಾನ ಎಫ್-16 ಸುಮಾರು 1 ಗಂಟೆಗಳ ಕಾಲ ಹಿಂಬಾಲಿಸಿದೆ. ಸೆಪ್ಟೆಂಬರ್ 23ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪಾಕಿಸ್ತಾನ ತನ್ನ ವಾಯುಪ್ರದೇಶದಲ್ಲಿ ಭಾರತದ ವಿಮಾನ ಹಾರಾಡಲು ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಿದ ನಂತರ ಸ್ಪೈಸ್​ಜೆಟ್​​​​ನ ಎಸ್​​ಜಿ-21 ದೆಹಲಿಯಿಂದ ಕಾಬೂಲಿಗೆ ಹೊರಟಿತ್ತು. ಅದರಲ್ಲಿ 120 ಮಂದಿ ಪ್ರಯಾಣಿಕರಿದ್ದರು. ಆದ್ರೆ ಈ ವೇಳೆ ಸುಮಾರು 1 ಗಂಟೆ ಕಾಲ ಸ್ಪೈಸ್ ಜೆಟ್ ವಿಮಾನವನ್ನು ಪಾಕಿಸ್ತಾನದ ಎಫ್​​​​-16 ವಿಮಾನ ಹಿಂಬಾಲಿಸಿದೆ. ಅಲ್ಲದೆ ವಿಮಾನದ ಎತ್ತರ ಕಡಿಮೆ ಮಾಡಿ, ಮಾಹಿತಿ  ನೀಡುವಂತೆ ಸ್ಪೈಸ್​ ಜೆಟ್ ಪೈಲಟ್​​ಗೆ ಸೂಚಿಸಿದ್ದಾರೆ. ಹೀಗಾಗಿ ಪೈಲಟ್​​ ಎತ್ತರ ಕಡಿಮೆ ತಮ್ಮದು ಭಾರತದ ವಿಮಾನ. ದೆಹಲಿಯಿಂದ ಕಾಬೂಲ್​ಗೆ ಹೊರಟಿದೆ. 120 ಮಂದಿ ಪ್ರಯಾಣಿಕರಿದ್ದಾರೆ ಎಂದು ಮಾಹಿತಿ ನೀಡಿದೆ. ನಂತರ ಪಾಕ್ ವಾಯುಸೇನೆ ಅಧಿಕಾರಿಗಳು ಸ್ಪೈಸ್ ಜೆಟ್ ವಿಮಾನ ತೆರಳಲು ಬಿಟ್ಟಿದ್ದಾರೆ.

ವಿಮಾನದಲ್ಲಿ ಒಂದು ಕೋಡ್ ಇರುತ್ತೆ. ಅದೇ ರೀತಿ ಸ್ಫೈಸ್​ ಜೆಟ್​ಗೂ ಕೋಡ್ ಇದ್ದು ಎಸ್​​​ಜಿ-21 ಅನ್ನೋದು ಅದರ ಕೋಡ್ ಆಗಿದೆ. ಆದ್ರೆ ಪಾಕ್ ವಾಯುಸೇನೆಯ ಎಫ್​-16 ವಿಮಾನದಲ್ಲಿದ್ದ ಅಧಿಕಾರಿಗಳು ಅದನ್ನು ಐಎ ಎಂದು ತಪ್ಪಾಗಿ ಓದಿದ್ದಾರೆ. ಐಎ ಅಂದ್ರೆ ಇಂಡಿಯನ್ ಏರ್​ಫೋರ್ಸ್​​​ ಎಂದು ಅರ್ಥ ಬರುತ್ತೆ. ಹೀಗಾಗಿಯೇ ಇದು ಭಾರತದ ಯುದ್ಧ ವಿಮಾನವೇ ಇರಬೇಕೆಂದು ಭಾವಿಸಿದ್ದ ಪಾಕಿಗಳು ಹಿಂಬಾಲಿಸಿ ಬಂದಿದ್ದರು ಎಂದು ತಿಳಿದು ಬಂದಿದೆ.

Contact Us for Advertisement

Leave a Reply