ಕಾಬೂಲ್ ಪ್ರವಾಸ ಪ್ಲಾನ್ ಕೈಬಿಟ್ಟಿದ್ಯಾಕೆ ಪಾಕ್ ಎನ್​ಎಸ್​​ಎ!

masthmagaa.com:

ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸೂಫ್ ಅಫ್ಘಾನಿಸ್ತಾನ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಕಾಬೂಲ್​​ನಲ್ಲಿ ಪಾಕ್ ವಿರುದ್ಧ ನಡೆದಿದ್ದ ಪ್ರತಿಭಟನೆ ಪ್ಲಾನ್​​ಗೆ ಹೆದರಿ ಈ ನಿರ್ಧಾರ ಕೈಗೊಳ್ಳಲಾಗಿದೆ ಅಂತ ಹೇಳಲಾಗ್ತಿದೆ. ಜನವರಿ 18ರಂದು ಮೊಯೀದ್ ಯೂಸೂಫ್ ನಿಯೋಗದೊಂದಿಗೆ ಕಾಬೂಲ್​ಗೆ ತೆರಳಬೇಕಿತ್ತು. ಅಲ್ಲಿ ಉಭಯದೇಶಗಳ ನಡುವಿನ ಡ್ಯುರಂಡ್ ಲೈನ್ ಅಂದ್ರೆ ಗಡಿ ವಿವಾದ ಮತ್ತು ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವಿನ ಬಗ್ಗೆ ಚರ್ಚೆ ನಡೆಸಬೇಕಿತ್ತು. ಆದ್ರೆ ನಿಗದಿತ ಸಮಯದಲ್ಲಿ ಈ ಪ್ರವಾಸ ಕೈಗೊಂಡಿರಲಿಲ್ಲ. ಇದೀಗ ಪ್ರವಾಸವನ್ನೇ ರದ್ದುಗೊಳಿಸಲಾಗಿದೆ. ಯಾಕಂದ್ರೆ ಕಾಬೂಲ್​ನಲ್ಲಿರೋ ಹಮೀದ್ ಖರ್ಝೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆಗೆ ಪ್ಲಾನ್ ಮಾಡಲಾಗಿದೆ ಅಂತ ಮಾಹಿತಿ ಲಭ್ಯವಾಗಿತ್ತು. ಇದೇ ಕಾರಣಕ್ಕೆ ಪಾಕ್ ಎನ್​ಎಸ್​ಎ ಮೊಯೀದ್ ಯೂಸೂಫ್ ಹೆದರಿ, ಪ್ರವಾಸ ರದ್ದು ಮಾಡಿದ್ರು ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply