ಇಮ್ರಾನ್‌ ಖಾನ್‌ ಫೋನ್‌ ಹ್ಯಾಕ್‌ ಹಿಂದೆ ಮೋದಿ ಸರ್ಕಾರ ಕೈವಾಡ : ಪಾಕಿಸ್ತಾನ

masthmagaa.com:

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಫೋನ್ ಇಸ್ರೇಲ್ ಮೂಲದ ಪೆಗಾಸಸ್ ಸ್ಪೈವೇರ್ ಮೂಲಕ ಹ್ಯಾಕ್ ಆಗಿರೋದು ಫುಲ್ ವಿವಾದಕ್ಕೆ ಕಾರಣವಾಗಿದೆ. ಏನ್ ಹೇಳ್ಬೇಕು ಅಂತ ಗೊತ್ತಾಗದೇ ಭಾರತ ಮತ್ತು ನವಾಜ್ ಷರೀಫ್ ಕಡೆಗೆ ಬೊಟ್ಟು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ರಾಜ್ಯ ಖಾತೆ ಸಚಿವ ಫಾರೂಖ್ ಹಬೀಬ್​​, ನವಾಜ್ ಷರೀಫ್ ಪ್ರಧಾನಿಯಾಗಿದ್ದಾಗ ಫೋನ್ ಹ್ಯಾಕ್ ಆಗಿರಬಹುದು. ಅದು ಕೂಡ ತಮ್ಮ ಸ್ನೇಹಿತ ಭಾರತದ ಪ್ರಧಾನಿ ಮೋದಿ ನೆರವಿನೊಂದಿಗೆ ಇಮ್ರಾನ್ ಖಾನ್ ಈ ಹ್ಯಾಕ್ ಮಾಡಿರೋ ಸಾಧ್ಯತೆ ಇದೆ ಅಂತ ಹೇಳಿದ್ದಾರೆ. ಭಾರತದ ಮೋದಿ ಸರ್ಕಾರ ಕೂಡ ಪೆಗಾಸಸ್​​​ನ ಮಾತೃಸಂಸ್ಥೆ ಎನ್​ಎಸ್​​ಒ ಗ್ರೂಪ್​​ನ ಗ್ರಾಹಕರ ಲಿಸ್ಟ್​ನಲ್ಲಿದೆ. ಈ ಹಿಂದೆ ಪಾಕ್ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಪ್ರಧಾನಿ ಮೋದಿಯವರ ಪ್ರಮಾಣ ವಚನ ಸಮಾರಂಭಕ್ಕೆ ಹೋಗಿದ್ರು. ಆದ್ರೆ ಜಮ್ಮು ಕಾಶ್ಮೀರದ ಹುರಿಯತ್ ನಾಯಕರನ್ನು ಭೇಟಿಯಾಗಿರಲಿಲ್ಲ.. ನವಾಜ್ ಷರೀಫ್ ಫೋನ್ ಟ್ಯಾಪ್ ಮಾಡೋದು ಇದೇನೂ ಹೊಸತಲ್ಲ.. ಈ ಹಿಂದೆ ಜಡ್ಜ್​​ಗಳ ಫೋನ್ ಕದ್ದಾಲಿಕೆಯಲ್ಲೂ ನವಾಜ್ ಷರೀಫ್ ಹೆಸರು ಕೇಳಿ ಬಂದಿತ್ತು ಅಂತ ಹೇಳಿದ್ದಾರೆ. ಇನ್ನು ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ಫವಾದ್ ಚೌಧರಿ ಕೂಡ ಭಾರತದ ಮೇಲೆ ಗೂಬೆ ಕೂರಿಸೋ ಮಾತಾಡಿದ್ದಾರೆ. ಭಾರತದ ಗೂಢಚರ್ಯೆ ವಿಚಾರವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸುತ್ತೇವೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾಯ್ತಿದೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply