ಪಾಕ್‍ನಿಂದ ಭಾರತಕ್ಕೆ ಬರುತ್ತಿವೆ ನಕಲಿ ನೋಟುಗಳು..!

ನೋಟು ನಿಷೇಧವಾಗಿ 3 ವರ್ಷಗಳೇ ಕಳೆದುಹೋಗಿದೆ. ಈಗ ಪುನಃ ಪಾಕಿಸ್ತಾನ ನಕಲಿ ನೋಟ್ ಪ್ರಿಂಟ್ ಮಾಡಿ ಭಾರತಕ್ಕೆ ರವಾನಿಸಲು ಶುರು ಮಾಡಿದೆ. ನೋಟು ನಿಷೇಧಕ್ಕಿಂತ ಮುನ್ನ ಹೇಗೆ ನಕಲಿ ನೋಟುಗಳನ್ನು ಮುದ್ರಿಸಿ ಕಳುಹಿಸುತ್ತಿತ್ತೋ ಅದೇ ರೀತಿ ಈಗ ಪುನಃ ನೋಟುಗಳನ್ನು ಮುದ್ರಿಸಿ ಕಳುಹಿಸುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಪಾಕಿಸ್ತಾನ ಭಾರತದ ನೋಟುಗಳನ್ನು ಯಥಾವತ್ತಾಗಿ ನಕಲು ಮಾಡಿ, ಮುದ್ರಿಸಿ ಲಷ್ಕರ್ ಎ ತೊಯ್ಬಾ, ಜೈಷ್ ಎ ಮೊಹ್ಮದ್ ನಂತಹ ಉಗ್ರ ಸಂಘಟನೆಗಳಿಗೆ ನೀಡುತ್ತಿದೆ. ಪಾಕಿಸ್ತಾನದ ಮಲೀರ್ ಹಾಲ್ಟ್ ಪ್ರದೇಶದಲ್ಲಿರೋ ಪಾಕಿಸ್ತಾನ ಸೆಕ್ಯೂರಿಟಿ ಪ್ರೆಸ್‍ನಲ್ಲಿ ಈ ನೋಟುಗಳನ್ನು ಪ್ರಿಂಟ್ ಮಾಡಲಾಗುತ್ತಿದೆ. ಈ ನಕಲಿ ನೋಟುಗಳಲ್ಲಿ ಇದೇ ಮೊದಲ ಬಾರಿಗೆ 2000 ರೂಪಾಯಿ ನೋಟುಗಳಲ್ಲಿ ಬಳಸೋ ಆಪ್ಟಿಕಲ್ ವೇರಿಯೇಬಲ್ ಇಂಕ್ ಬಳಸಲಾಗುತ್ತಿದೆ. ನಾವು ನೋಟು ತಿರುಗಿಸಿದಾಗ ಬಣ್ಣ ಬದಾಲಾಗೋ ಬಣ್ಣವೇ ಈ ಇಂಕ್. ಈ ರೀತಿ ನೋಟುಗಳನ್ನು ತಯಾರಿಸಿ ವಿವಿಧ ಮಾರ್ಗಗಳ ಮೂಲಕ ಭಾರತಕ್ಕೆ ರವಾನಿಸುತ್ತಿದೆ.

Contact Us for Advertisement

Leave a Reply