ಟಿಕೆಟ್ ರೇಟ್ ಕಮ್ಮಿ ಮಾಡಿದಿದ್ರೆ ವಿಮಾನ ಹಾರಕ್ಕೇ ಬಿಡಲ್ಲ: ತಾಲಿಬಾನ್

masthmagaa.com:

ತಾಲಿಬಾನಿಗಳು ತಮ್ಮ ಸರ್ಕಾರ ನಡೆಸೋ ಶೈಲಿ ಹೇಗಿರುತ್ತೆ ಅನ್ನೋ ಒಂದೊಂದೇ ಝಲಕ್ ತೋರಿಸ್ತಾ ಬರ್ತಿದ್ದಾರೆ. ಇದೀಗ Afghanistan Civil Aviation Authority, ವಿಮಾನ ಕಂಪನಿಗಳಿಗೆ ರೇಟು ಕಮ್ಮಿ ಮಾಡುವಂತೆ ಆದೇಶ ಹೊರಡಿಸಿದೆ. ಪಾಕಿಸ್ತಾನ ಬಿಟ್ರೆ ಬೇರೆ ಯಾರೂ ಅಫ್ಘಾನಿಸ್ತಾನದೊಂದಿಗೆ ರೆಗ್ಯುಲ್ ವಿಮಾನ ಹಾರಾಟ ಇಟ್ಕೊಂಡಿಲ್ಲ. ಹೀಗಾಗಿ ಅಫ್ಘನಿಸ್ತಾನದ ಕಾಬುಲ್ ನಿಂದ ಪಾಕಿಸ್ತಾನದ ಇಸ್ಲಮಾಬಾದ್ ನಡುವೆ ಹಾರಾಡೋ ವಿಮಾನಗಳ ರೇಟು ಕಮ್ಮಿ ಮಾಡಬೇಕು. ‘ಪಾಕಿಸ್ತಾನ್ ಇಂಟರ್ ನ್ಯಾಶನಲ್ ಏರ್ಲೈನ್ಸ್’ ಹಾಗೂ ತಮ್ಮದೇ ದೇಶದ ‘ಕಾಮ್ ಏರ್’ ವಿಮಾನಯಾನ ಕಂಪನಿಗಳು ಈ ಕೂಡಲೇ ಆಗಸ್ಟ್ 15ಕ್ಕೂ ಮೊದಲು ಏನ್ ರೇಟಿತ್ತೋ ಅದೇ ರೇಟಿಗೆ ಟಿಕೆಟ್ ಕೊಡಬೇಖು. ಇಲ್ಲದೇ ಹೋದರೆ ನಿಮ್ಮ ಹಾರಾಟವನ್ನೇ ಬಂದ್ ಮಾಡ್ತೀವಿ ಅಂತ ಧಮಕಿ ಹಾಕಿದ್ದಾರೆ ತಾಲಿಬಾನಿಗಳು. ಇದಕ್ಕೆ ರೊಚ್ಚಿಗೆದ್ದಿರೋ ತಾಲಿಬಾನಿಗಳ ಚಾಚಾ ಪಾಕಿಸ್ತಾನ, ಕಾಬುಲ್ಗೆ PIA ವಿಮಾನಗಳ ಹಾರಟವನ್ನ ರದ್ದು ಮಾಡಿದೆ.

-masthmagaa.com

Contact Us for Advertisement

Leave a Reply