ಕೌನ್ ಬನೇಗಾ ಕರೋಡ್ ಪತಿ ಮೂಲಕ ಪಾಕ್ ಷಡ್ಯಂತ್ರ..!

ಕೌನ್ ಬನೇಗಾ ಕರೋಡ್ ಪತಿ ಭಾರತದ ಅತ್ಯಂತ ಪ್ರಸಿದ್ಧ ಕಾರ್ಯಕ್ರಮ.. ಇದರಲ್ಲಿ ಬಡವರು ಕೂಡ ತಮ್ಮ ಅದೃಷ್ಟ ಬದಲಾಯಿಸಿಕೊಳ್ಳಬಹುದು. ಆದ್ರೆ ಭಾರತದ ವಿರುದ್ಧ ದಿನಕ್ಕೊಂದು ಷಡ್ಯಂತ್ರ ರಚಿಸೋ ಪಾಕಿಸ್ತಾನ ಈಗ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮವನ್ನೇ ಭಾರತದ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ತಿದೆ. ಭಾರತೀಯ ಭದ್ರತಾ ಪಡೆಗಳಿಗೆ ಸಂಬಂಧಿಸಿದವರನ್ನು ಟಾರ್ಗೆಟ್ ಮಾಡಿ ಮಾಹಿತಿ ಪಡೆಯೋಕೆ ಪ್ರಯತ್ನ ಮಾಡ್ತಿದೆ. ಈ ಬಗ್ಗೆ ಕೇಂದ್ರ ಗೃಹಸಚಿವಾಲಯವೇ ಸ್ಪಷ್ಟಪಡಿಸಿದೆ. ಕೌನ್ ಬನೇಗಾ ಕರೋಡ್ ಪತಿ ಹೆಸರಲ್ಲಿ ಗ್ರೂಪ್‍ಗಳನ್ನು ಮಾಡಿ ಅದರಲ್ಲಿ ಭಾರತೀಯರನ್ನು ಸೇರಿಸಲಾಗುತ್ತಿದೆ. ಜೊತೆಗೆ ಕೆಬಿಸಿ ಹೆಸರಲ್ಲಿ ನಕಲಿ ಸಂದೇಶಗಳನ್ನು ಕಳುಹಿಸಿ ಹೆದರಿಸಲಾಗುತ್ತಿದೆ. ಈಗಾಗಲೇ ಈ ರೀತಿಯ 2 ನಂಬರ್‍ಗಳನ್ನು ಗೃಹಇಲಾಖೆ ಪತ್ತೆಹಚ್ಚಿದೆ. ಅಲ್ಲದೆ ಯಾರಾದರೂ ಇಂಥಹ ಗ್ರೂಪ್‍ಗಳಲ್ಲಿ ಈಗಾಗಲೇ ಶಾಮೀಲಾಗಿ ಆಗಿದ್ದರೆ ಕೂಡಲೇ ಹೊರಗೆ ಬರುವಂತೆ ಸೂಚಿಸಿದೆ. ಈ ಹಿಂದೆ ಕಾಶ್ಮೀರದ ವಿಚಾರವಾಗಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದ 200ಕ್ಕೂ ಹೆಚ್ಚು ನಕಲಿ ಟ್ವಿಟ್ಟರ್ ಖಾತೆಗಳನ್ನು ಪತ್ತೆಹಚ್ಚಲಾಗಿತ್ತು.

Contact Us for Advertisement

Leave a Reply