masthmagaa.com:

ಕೊರೋನಾ ಕಂಟ್ರೋಲ್ ಮಾಡಿರುವ ನ್ಯೂಜಿಲ್ಯಾಂಡ್​ನಲ್ಲಿ ಪಾಕ್​ ಕ್ರಿಕೆಟಿಗರು ನಿಯಮಗಳನ್ನ ಗಾಳಿಗೆ ತೂರಿ ಅಲ್ಲಿನ ಸರ್ಕಾರದ ಟೆನ್ಷನ್ ಹೆಚ್ಚಿಸಿದ್ದಾರೆ. ಏನಾಗಿದೆ ಅಂದ್ರೆ, ಪಾಕ್ ಕ್ರಿಕೆಟ್​​ ತಂಡ ನ್ಯೂಜಿಲ್ಯಾಂಡ್​​ಗೆ ಕ್ರಿಕೆಟ್ ಟೂರ್ ಕೈಗೊಂಡಿದೆ. ಪಾಕ್​ ಕ್ರಿಕೆಟಿಗರು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 54 ಜನ ಲಾಹೋರ್​ನಿಂದ ನ್ಯೂಜಿಲ್ಯಾಂಡ್​ನ ಕ್ರೈಸ್ಟ್​ಚರ್ಚ್​​ಗೆ ಬಂದಿದ್ದಾರೆ. ಬಂದವರಿಗೆ ಕೊರೋನಾ ಟೆಸ್ಟ್ ಮಾಡಿದಾಗ 6 ಜನರಿಗೆ ಪಾಸಿಟಿವ್ ಬಂದಿದೆ. ತಕ್ಷಣ ಅವರನ್ನ ಕ್ವಾರಂಟೈನ್​ಗೆ ಒಳಪಡಿಸಿ, ಉಳಿದವರನ್ನ ಐಸೋಲೇಷನ್​ನಲ್ಲಿ ಇರಿಸಲಾಯ್ತು. ಬೇರೆ ದೇಶಕ್ಕೆ ಹೋದ್ಮೇಲೆ ಅಲ್ಲಿ ಹೇಳಿದ ರೀತಿಯಲ್ಲಿ, ಅಲ್ಲಿನ ರೂಲ್ಸ್ ಫಾಲೋ ಮಾಡ್ಕೊಂಡು ಇರ್ಬೇಕು ತಾನೇ.. ಅದನ್ನ ಬಿಟ್ಟು ಈ ಪಾಕ್​ ಕ್ರಿಕೆಟಿಗರು ಮತ್ತು ಸಿಬ್ಬಂದಿ ನಿಯಮಗಳನ್ನ ಗಾಳಿಗೆ ತೂರಿ ಬೇಕಾಬಿಟ್ಟಿ ವರ್ತಿಸಿದ್ದಾರೆ. ಇವರ ಆಟ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನ ಗಂಭೀರವಾಗಿ ಪರಿಗಣಿಸಿರುವ ನ್ಯೂಜಿಲ್ಯಾಂಡ್ ಸರ್ಕಾರ, ‘ನ್ಯೂಜಿಲ್ಯಾಂಡ್​ಗೆ ಕ್ರಿಕೆಟ್ ಆಡೋಕೆ ಬರೋದೇ ಒಂದು ಭಾಗ್ಯ. ಹೀಗಾಗಿ ಆಟಗಾರರು ಕೂಡ ಕೊರೋನಾ ನಿಯಮಗಳನ್ನ ಪಾಲಿಸಬೇಕು. ನಮ್ಮ ಸಿಬ್ಬಂದಿಗೆ ಸೋಂಕು ತಗುಲದಂತೆ ನೋಡಿಕೊಳ್ಳಬೇಕು’ ಅಂತ ಫೈನಲ್​ ವಾರ್ನಿಂಗ್ ಕೊಟ್ಟಿದೆ. ಅಂದ್ಹಾಗೆ ಡಿಸೆಂಬರ್ 18ರಿಂದ ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ ನಡುವೆ ಟಿ-20 ಮತ್ತು ಟೆಸ್ಟ್ ಸರಣಿ ಆರಂಭವಾಗಲಿದೆ. ಕೊರೋನಾ ಬಗ್ಗೆ ಪಾಕ್ ಆಟಗಾರರಿಗೆ ಸೀರಿಯಸ್​ನೆಸ್​ ಇಲ್ದೆ ಇದ್ರೆ, ಅತ್ತ ಪಾಕ್​ ಜೊತೆ ಕ್ರಿಕೆಟ್​ ಸರಣಿ ಬೇಕಿತ್ತಾ ಅಂತ ನ್ಯೂಜಿಲ್ಯಾಂಡ್​ ಯೋಚಿಸ್ತಾ ಇದೆ.

-masthmagaa.com

Contact Us for Advertisement

Leave a Reply