ಪಾಕಿಸ್ತಾನದಿಂದ ಮತ್ತೊಂದು ಮಹಾ ಮೋಸ!

masthmagaa.com:

ಪಾಕ್ ಆಕ್ರಮಿತ ಕಾಶ್ಮೀರಲ್ಲಿರೋ ಗಿಲ್ಗಿಟ್ ಬಲ್ಟಿಸ್ತಾನಕ್ಕೆ ಪ್ರಾಂತೀಯ ಸ್ಥಾನಮಾನ ನೀಡೋಕೆ ಪಾಕಿಸ್ತಾನ ಕಾಯ್ದೆಯೊಂದನ್ನು ಸಿದ್ಧಪಡಿಸಿದೆ. ಪಾಕಿಸ್ತಾನದ ಕಾನೂನು ಸಚಿವಾಲಯ ಈ ಮಸೂದೆ ಸಿದ್ಧಪಡಿಸಿದ್ದು, ಇದು ಜಾರಿಗೆ ಬಂದ್ರೆ ಗಿಲ್ಗಿಟ್ ಬಲ್ಟಿಸ್ತಾನದಲ್ಲಿರೋ ಸರ್ವೋಚ್ಛ ಮೇಲ್ಮನವಿ ನ್ಯಾಯಾಲಯ ಅಸ್ತಿತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ. ಅದೇ ರೀತಿ ಈ ಭಾಗದ ಚುನಾವಣಾ ಆಯೋಗ ಕೂಡ ಪಾಕಿಸ್ತಾನ ಚುನಾವಣಾ ಆಯೋಗದೊಂದಿಗೆ ವಿಲೀನವಾಗಲಿದೆ ಅಂತ ಮಾಹಿತಿ ಸಿಕ್ಕಿದೆ. ಈಗಾಗಲೇ ಈ ಮಸೂದೆ ಸಿದ್ಧಪಡಿಸಿ ಪ್ರಧಾನಿ ಇಮ್ರಾನ್ ಖಾನ್​​​ಗೆ ಒಪ್ಪಿಸಲಾಗಿದೆ. ಅದೂ ಅಲ್ಲದೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಸ್ತಿತ್ವದಲ್ಲಿರೋ ಎರಡು ಗಿಲ್ಗಿಟ್ ಬಲ್ಟಿಸ್ತಾನ ಮತ್ತು ಕಾಶ್ಮೀರದ ಸರ್ಕಾರಗಳ ಅಭಿಪ್ರಾಯ ಪಡೆದೇ ಈ ಮಸೂದೆ ಸಿದ್ಧಪಡಿಸಲಾಗಿದೆ ಅಂತ ಕೂಡ ಗೊತ್ತಾಗಿದೆ. ಅಂದಹಾಗೆ ಕಾಶ್ಮೀರದ ಒಂದು ಭಾಗ ಪಾಕ್ ವಶದಲ್ಲಿದೆ. ಅದನ್ನ ನಾವು ಪಾಕ್ ಆಕ್ರಮಿತ ಕಾಶ್ಮೀರ ಅಂತ ಕರೀತೀವಿ. ಅದ್ರಲ್ಲಿ ಈ ಗಿಲ್ಗಿಟ್ ಬಲ್ಟಿಸ್ತಾನ್ ಮತ್ತು ಕಾಶ್ಮೀರ ಎಂಬ ಭಾಗ ಇದೆ. ಕಾಶ್ಮೀರವನ್ನು ಪಾಕಿಗಳು ಆಜಾದ್ ಕಾಶ್ಮೀರ ಅಂತ ಕರೀತಾರೆ. ಆದ್ರೂ ಕೂಡ ತಮ್ಮದೇ ನಿಯಂತ್ರಣ ಹೊಂದಿದ್ದಾರೆ. ಆದ್ರೆ ಭಾರತ ಮಾತ್ರ ಗಿಲ್ಗಿಟ್ ಬಲ್ಟಿಸ್ತಾನ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗ ಅಂತ ಭಾರತ ಹೇಳಿಕೊಂಡೇ ಬಂದಿದೆ.

-masthmagaa.com

Contact Us for Advertisement

Leave a Reply