ನೀರು ನಿಲ್ಲಿಸ್ತೇವೆ ಎಂದ ಮೋದಿ ಮಾತಿಗೆ ಬೆಚ್ಚಿದ ಪಾಕ್​​​​ನಿಂದ ಗೊಡ್ಡು ಬೆದರಿಕೆ..!

ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಹರಿಯಾಣದಲ್ಲಿ ಚುನಾವಣಾ ಭಾಷಣ ಉದ್ದೇಶಿಸಿ ಮಾತನಾಡುತ್ತಾ ಪಾಕ್​​ಗೆ ಹರಿಯೋ ನೀರನ್ನು ತಡೆದು ಹರಿಯಾಣಕ್ಕೆ ಹರಿಸುತ್ತೇನೆ ಎಂದಿದ್ದರು. ಇದ್ರಿಂದ ಫುಲ್ ಉರಿದುಕೊಂಡು ಪ್ರತಿಕ್ರಿಯಿಸಿರುವ ಪಾಕಿಸ್ತಾನ, ನೀರು ತಡೆದ್ರೆ ತಕ್ಕ ಉತ್ತರ ನೀಡುತ್ತೇವೆ ಎಂದಿದೆ. ಈ ಬಗ್ಗೆ ಮಾತನಾಡಿದ ಪಾಕ್ ವಿದೇಶಾಂಗ ಇಲಾಖೆ ವಕ್ತಾರ ಮೊಹ್ಮದ್ ಫೈಸಲ್​​, ಸಿಂಧೂ ಒಪ್ಪಂದದ ಪ್ರಕಾರ ಸಿಂಧೂ ನದಿಯ ಮೇಲೆ ಭಾರತಕ್ಕೆ ವಿಶೇಷ ಅಧಿಕಾರವಿದೆ. ಒಂದು ವೇಳೆ ಭಾರತ ನದಿ ನೀರನ್ನು ತಡೆದರೆ ಪ್ರಚೋದನಾಕಾರಿ ತಂತ್ರ ಎಂದು ಭಾವಿಸುತ್ತೇವೆ. ಜೊತೆಗೆ ಉತ್ತರವನ್ನೂ ನೀಡುತ್ತೇವೆ. ಸಿಂಧೂ ನದಿಯ ಮೇಲೆ ಪಾಕಿಸ್ತಾನಕ್ಕೆ ಹಕ್ಕಿದೆ ಎಂದಿದ್ದಾರೆ.

ಆದ್ರೆ ನಿನ್ನೆ ಭಾಷಣ ಮಾಡಿದ್ದ ಪ್ರಧಾನಿ ಮೋದಿ, ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರು ಹರಿಯಾಣಕ್ಕೆ ಸೇರಿದ್ದು. ಹರಿಯಾಣದ ರೈತರ ಹೊಲಗಳಿಗೆ ಸೇರಬೇಕಾಗಿದ್ದು. ನಿಮ್ಮ ಮೋದಿ 70 ವರ್ಷಗಳಲ್ಲಿ ಆಗದ್ದನ್ನು ಮಾಡುತ್ತಾರೆ ನೋಡ್ತಾ ಇರಿ ಎಂದಿದ್ದರು.

Contact Us for Advertisement

Leave a Reply