ವಿಶ್ವಸಂಸ್ಥೆಯಲ್ಲೂ ಭಾರತದ ಮೇಲೆ ಪಾಕ್ ಸಿಟ್ಟು..!

ಭಾರತದ ಮೇಲಿನ ಸಿಟ್ಟನ್ನು ಪಾಕಿಸ್ತಾನ ವಿಶ್ವಸಂಸ್ಥೆಯಲ್ಲೂ ಮುಂದುವರಿಸಿದೆ. ವಿಶ್ವಸಂಸ್ಥೆಯ ಅಧಿವೇಶನ ನಡುವೆ ಸಾರ್ಕ್ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ನಡೆಸಲಾಯ್ತು. ಆದ್ರೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಾತನಾಡುತ್ತಿದ್ದಂತೆ ಪಾಕ್ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಶಿ ಎದ್ದು ಹೊರನಡೆದಿದ್ದಾರೆ. ತಮ್ಮ ಭಾಷಣ ಮುಗಿಸಿದ ಎಸ್.ಜೈಶಂಕರ್ ಕೂಡ ಖುರೇಷಿ ವಾಪಸ್ ಬರುವ ಮುನ್ನವೇ ಅಲ್ಲಿಂದ ತೆರಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮೊಹಮ್ಮದ್ ಖುರೇಷಿ, ತಾವು ಭಾರತದ ಭಾಷಣ ತಿರಸ್ಕರಿಸಲು ಕಾಶ್ಮೀರ ವಿವಾದವೇ ಕಾರಣ ಎಂದಿದ್ದಾರೆ. ಮುಂದಿನ ಸಾರ್ಕ್ ಸಮ್ಮೇಳನ ಪಾಕಿಸ್ತಾನದ ಇಸ್ಲಾಮಾಬಾದ್‍ನಲ್ಲಿ ನಡೆಯೋದು ನಿಶ್ಚಿತ. 2016ರಲ್ಲಿ ಭಾರತದಿಂದಾಗಿ ಅದು ಸಾಧ್ಯವಾಗಲಿಲ್ಲ. ನಾವು ಪ್ರಧಾನಿ ಮೋದಿ ಮತ್ತು ಸಾರ್ಕ್ ಸದಸ್ಯ ರಾಷ್ಟ್ರಗಳಿಗೆ ಆಮಂತ್ರಣ ನೀಡುತ್ತಿದ್ದೇವೆ ಅಂದ್ರು. ಅಲ್ಲದೆ ಕಾಶ್ಮೀರದಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸುವವರೆಗೆ ಭಾರತದ ಜೊತೆ ಯಾವುದೇ ಮಾತುಕತೆ ಇಲ್ಲ. ಕಾಶ್ಮೀರದ ಜನರ ಮಾನವ ಹಕ್ಕುಗಳನ್ನು ರಕ್ಷಿಸಬೇಕಿದೆ ಎಂದು ಹೇಳಿದ್ದಾರೆ.

Contact Us for Advertisement

Leave a Reply