ಗಡಿಯತ್ತ ಪಾಕಿಗಳ ಮೆರವಣಿಗೆ..ಇಮ್ರಾನ್ ಕುರ್ಚಿಗೂ ಕಂಟಕ..!

ಇವತ್ತು ಪಾಕ್ ಆಕ್ರಮಿತ ಕಾಶ್ಮೀರದ ಜನ ಗಡಿ ನಿಯಂತ್ರಣ ರೇಖೆವರೆಗೆ ಮೆರವಣಿಗೆ ನಡೆಸಲಿದ್ದಾರೆ. ಇನ್ನೊಂದು ವಿಷ್ಯ ಅಂದ್ರೆ ಈ ಮೆರವಣಿಗೆಗೆ ಪಾಕಿಸ್ತಾನ ಸೇನೆಯೇ ರಕ್ಷಣೆ ನೀಡಲಿದೆ. ಜಮ್ಮು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ರದ್ದುಪಡಿಸಿದ ಭಾರತದ ಕ್ರಮವನ್ನು ವಿರೋಧಿಸುವ ಸಲುವಾಗಿ ಈ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಇನ್ನು ನಾವು ಯಾವುದೇ ರೀತಿಯ ಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಭಾರತೀಯ ಸೇನೆ ಕೂಡ ಹೇಳಿದೆ.

ಅತ್ತ ಜಮ್ಮು ಕಾಶ್ಮೀರ ವಿಚಾರದಲ್ಲಿ ಫುಲ್ ತಲೆಕೆಡಿಸಿಕೊಂಡಿರೋ ಇಮ್ರಾನ್ ಖಾನ್‍ಗೆ ಹೊಸ ಸಂಕಷ್ಟ ಎದುರಾಗಿದೆ. ಪ್ರಧಾನಿ ಕುರ್ಚಿಯ ಬುಡವೇ ಅಲುಗಾಡಲು ಆರಂಭಿಸಿದೆ. ಪಾಕಿಸ್ತಾನದ ಪ್ರಮುಖ ಬಲಪಂಥೀಯ ಸಂಘಟನೆ ಜಮೀಯತ್ ಉಲೇಮಾ ಇ ಇಸ್ಲಾಂ ಫಜಲ್ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಆಜಾದ್ ಮಾರ್ಚ್ ಹಮ್ಮಿಕೊಂಡಿದೆ. ಇದೇ ಅಕ್ಟೋಬರ್ 27ರಿಂದ ಆಜಾದ್ ಮಾರ್ಚ್ ಆರಂಭವಾಗಲಿದ್ದು, ಇಮ್ರಾನ್ ಖಾನ್ ಪ್ರಧಾನಿ ಹುದ್ದೆ ಬಿಟ್ಟು ಕೆಳಗಿಳಿಯಬೇಕು ಎಂದು ಒತ್ತಾಯಿಸಲಿದೆ. ಆರ್ಥಿಕ ಹಿಂಜರಿತ ಮತ್ತು ಇತರೆ ಸಮಸ್ಯೆಗಳಿಂದ ದೇಶವನ್ನು ಹೊರತರುವಲ್ಲಿ ಇಮ್ರಾನ್ ಖಾನ್ ಅಸಮರ್ಥರಾಗಿದ್ದಾರೆ ಅನ್ನೋದು ಜಮೀಯತ್ ಉಲೇಮಾ ಇ ಇಸ್ಲಾಂ ಫಜಲ್ ಸಂಘಟನೆ ಆರೋಪ.

ಇನ್ನು ವಿಪಕ್ಷಗಳಾದ ಪಿಎಂಎಲ್-ಎನ್, ಪಿಪಿಪಿ ಪಕ್ಷಗಳು ಪ್ರಧಾನಿ ಹುದ್ದೆಯಿಂದ ಇಮ್ರಾನ್ ಖಾನ್ ಕೆಳಗಿಳಿಸಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಸರ್ವಪಕ್ಷಗಳ ಸಭೆ ನಡೆಸಿ ನಿರ್ಣಯ ಕೈಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಜಮೀಯತ್ ಉಲೇಮಾ ಇ ಇಸ್ಲಾಂ ಫಜಲ್ ಮುಖ್ಯಸ್ಥ, ಮೌಲಾನಾ ಫಜಲುರ್ ರಹಮಾನ್ ಮಾತನಾಡಿ, ನಕಲಿ ಚುನಾವಣೆಯ ಪರಿಣಾಮವಾಗಿ ಇಮ್ರಾನ್ ಖಾನ್ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Contact Us for Advertisement

Leave a Reply