ಸತ್ಯ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ರಂತೆ..! ಇದು ಪಾಕ್ ಅವಸ್ಥೆ

ಜಮ್ಮು ಕಾಶ್ಮೀರದ ವಿಚಾರದಲ್ಲಿ 58 ರಾಷ್ಟ್ರಗಳು ಪಾಕಿಸ್ತಾನದ ಪರವಾಗಿವೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಹೇಳಿದ್ರು. ಆದ್ರೆ ಆ 58 ದೇಶಗಳು ಯಾವುದು ಎಂದು ಕೇಳಿದಾಗ ಮಾತ್ರ ಪಾಕ್ ವಿದೇಶಾಂಗ ಸಚಿವ ಮಹಮ್ಮದ್ ಖುರೇಷಿ ಫುಲ್ ಸಿಟ್ಟಾಗಿದ್ದಾರೆ. ಈ ಬಗ್ಗೆ ನಿರೂಪಕರು ನಿಮ್ಮನ್ನು ಬೆಂಬಲಿಸಿದ ದೇಶಗಳು ಯಾವುದು..? ಬೆಂಬಲಿಸದ ದೇಶಗಳು ಯಾವುದು ಎಂದು ಕೇಳಿದ್ದಾರೆ. ಆದ್ರೆ ಅಷ್ಟಕೆ ಸಿಟ್ಟಿಗೆದ್ದ ಮೊಹ್ಮದ್ ಖುರೇಷಿ, ನೀವು ಯಾವ ಅಜೆಂಡಾದಲ್ಲಿ ಕೆಲ್ಸ ಮಾಡ್ತಿದ್ದೀರಿ..? ಎಂದು ಕೆಂಡಕಾರಿದ್ದಾರೆ. ಅಲ್ಲದೆ ನಾನು ಟ್ವೀಟ್ ಮಾಡಿದ್ದೀನಿ ಎಂದು ಹೇಳಿದ್ದೀರಲ್ಲಾ.. ತೋರಿಸಿ ಎಲ್ಲಿದೆ ನಾನು ಮಾಡಿರುವ ಟ್ವೀಟ್ ಎಂದು ಗದರಿದ್ದಾರೆ. ಆಗ ನಿರೂಪಕರು ಖುರೇಷಿಯ ಟ್ವೀಟ್ ತೋರಿಸಿದಾಗ ನಾನು ಏನ್ ಹೇಳಿದ್ನೋ ಅಷ್ಟೆ. ನನ್ನ ಹೇಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಮ್ಮ ಮೊಂಡುವಾದವನ್ನು ಮುಂದುವರಿಸಿದ್ದಾರೆ.

Contact Us for Advertisement

Leave a Reply