ಪಾಕ್​ನಿಂದ ಅಧಿಕ ಪ್ರಸಂಗ​: ಭಾರತದ ಅಧಿಕಾರಿ ಕರೆಸಿ ‘ಹಿಜಬ್​’ ಉಪದೇಶ!

masthmagaa.com:

ಕರ್ನಾಟಕದ ಹಿಜಬ್​ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿರೋ ಭಾರತದ ರಾಜತಾಂತ್ರಿಕ ಅಧಿಕಾರಿಗೆ ಪಾಕಿಸ್ತಾನ ಸರ್ಕಾರ ಸಮನ್ಸ್ ನೀಡಿದೆ. ಇಸ್ಲಮಾಬಾದ್​​ನಲ್ಲಿರೋ ಭಾರತದ ರಾಜತಾಂತ್ರಿಕ ಅಧಿಕಾರಿ ಸುರೇಶ್​ ಕುಮಾರ್​ರನ್ನ ಪಾಕ್​ ವಿದೇಶಾಂಗ ವ್ಯವಹಾರಗಳ ಇಲಾಖೆಗೆ ಕರೆಸಿಕೊಂಡ ಪಾಕಿಸ್ತಾನ, ಹಿಜಬ್ ಧರಿಸಿದ್ದ ಮುಸ್ಲಿಂ ವಿದ್ಯಾರ್ಥಿನಿಯರನ್ನ ಬ್ಯಾನ್ ಮಾಡಿದ್ದು ಖಂಡನೀಯ ಅಂತೇಳಿದೆ. ಜೊತೆಗೆ ಕರ್ನಾಟಕದಲ್ಲಿ ಆರ್​ಎಸ್​ಎಸ್​-ಬಿಜೆಪಿ ಸೇರಿ ನಡೆಸುತ್ತಿರುವ ಹಿಜಬ್ ವಿರೋಧಿ ಅಭಿಯಾನದ ಬಗ್ಗೆ ಭಾರತ ಸರ್ಕಾರಕ್ಕೆ ನಮ್ಮ ತೀವ್ರ ಕಳವಳವನ್ನ ತಿಳಿಸಿ. ಹಿಜಬ್ ವಿರೋಧಿ ಅಭಿಯಾನವು ಮುಸ್ಲಿಂ ಮಹಿಳೆಯರನ್ನ ಅವಮಾನಿಸುವ, ಬೆದರಿಸುವ ದೊಡ್ಡ ಅಜೆಂಡಾವನ್ನ ಹೊಂದಿದೆ. ಭಾರತದಲ್ಲಿ ಮುಸ್ಲಿಂ ಮಹಿಳೆಯರ ಸುರಕ್ಷತೆ, ಭದ್ರತೆ, ಯೋಗಕ್ಷೇಮವನ್ನ ಖಚಿತಪಡಿಸಿಕೊಳ್ಳಲು, ಕರ್ನಾಟಕದಲ್ಲಿ ಮುಸ್ಲಿಂ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಲು ಭಾರತ ಸರ್ಕಾರ ತನ್ನ ಜವಾಬ್ದಾರಿಯನ್ನ ನಿರ್ವಹಿಸಬೇಕು ಅಂತ ಭಾರತದ ಅಧಿಕಾರಿಗೆ ಒತ್ತಿ ಹೇಳಿದ್ದೀವಿ ಅಂತ ಪಾಕ್​​ ವಿದೇಶಾಂಗ ಇಲಾಖೆ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಹಿಜಬ್ ವಿಚಾರ ಮಾತ್ರವಲ್ಲದೆ ಉತ್ತರಾಖಂಡ್​​ನ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್​​ನಲ್ಲಿ ಹಿಂದೂ ನಾಯಕರು ಮುಸ್ಲಿಮರ ವಿರುದ್ಧ ಬಹಿರಂಗವಾಗಿ ಆಡಿದ ಪ್ರಚೋದನಕಾರಿ ಭಾಷಣದ ಬಗ್ಗೆ ಬಿಜೆಪಿ ನಾಯಕತ್ವ ಮೌನ ವಹಿಸಿರೋದನ್ನ ಕೂಡ ನಾವು ಖಂಡಿಸ್ತೀವಿ ಅಂತ ಪಾಕಿಸ್ತಾನ​ ಹೇಳಿದೆ.

-masthmagaa.com

Contact Us for Advertisement

Leave a Reply