ಪಾಕಿಸ್ತಾನಕ್ಕೆ ಕ್ರಿಕೆಟ್ ನಡೆಸೋ ತಾಕತ್ತೂ ಇಲ್ಲ: ಎಂಥಾ ಅವಸ್ಥೆ ನೋಡಿ…

ಪಾಕಿಸ್ತಾನದಲ್ಲಿ 10 ವರ್ಷಗಳ ಬಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ನಡೀತಿದೆ. ರಕ್ಷಣೆ ಇಲ್ಲ ಅಂತ ಆತಂಕದ ನಡುವೆಯೇ ಶ್ರೀಲಂಕಾ ಪಾಕಿಸ್ತಾನಕ್ಕೆ ಹೋಗಿತ್ತು. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. 2ನೇ ಏಕದಿನ ಪಂದ್ಯದಲ್ಲಿ ಭಾರಿ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಬರ್ತಾರೆ, ಎಲ್ಲವೂ ಸರಿಯಾಗಿ ಮಾಡಿ ವಿಶ್ವಕ್ಕೆ ಒಳ್ಳೆಯ ಸಂದೇಶ ಕೊಟ್ಬೇಕು ಅಂತ ಪಾಕ್ ಆಸೆ ಇಟ್ಕೊಂಡಿತ್ತು. ಆದ್ರೆ ಅದು ಫುಲ್ ಉಲ್ಟಾ ಆಗಿ ಸಾಮಾಜಿಕ ಜಾಲತಾಣದಲ್ಲಿ ಫುಲ್ ಟ್ರೋಲ್ ಆಗಿದೆ.

ಯಾಕಂದ್ರೆ ಕರಾಚಿಯಲ್ಲಿ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಈ ಪಂದ್ಯ ವೀಕ್ಷಣೆಗೆ ಕ್ರಿಕೆಟ್ ಅಭಿಮಾನಿಗಳೇ ಬಂದಿರಲಿಲ್ಲ. ಸ್ಟೇಡಿಯಂ ಫುಲ್ ಖಾಲಿ ಹೊಡೆಯುತ್ತಿತ್ತು. ಅಲ್ಲದೆ ಕತ್ತಲಾದ ಬಳಿಕ ಪಂದ್ಯದ ವೇಳೆ ಎರಡೆರಡು ಬಾರಿ ಫ್ಲಡ್‍ಲೈಟ್ಸ್ ಆಫ್ ಆಗಿ ತೊಂದ್ರೆಯಾಯ್ತು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಮರ್ಯಾದೆ ಹರಾಜು ಹಾಕಿಕೊಂಡಿದೆ. ಭಾರತೀಯರಂತೂ ಪಾಕಿಗಳನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡ್ತಿದ್ದಾರೆ. 67 ರನ್‍ಗಳಿಂದ ಪಾಕ್ ಪಂದ್ಯ ಗೆದ್ದಿದ್ದು, ಶ್ರೀಲಂಕಾ ಸೋಲಿಗೆ ಲೈಟ್ಸ್ ಕೈಕೊಟ್ಟಿದ್ದೇ ಕಾರಣ ಎಂದು ಶ್ರೀಲಂಕಾ ಕ್ರಿಕೆಟ್ ಫ್ಯಾನ್ಸ್ ಕೆಂಡಕಾರಿದ್ದಾರೆ.

ಈ ಹಿಂದೆ 2009ರಲ್ಲಿ ಲಾಹೋರ್‍ನಲ್ಲಿ ಶ್ರೀಲಂಕಾ ಆಟಗಾರರ ಬಸ್ ಮೇಲೆ ಕಲ್ಲು ಎಸೆದಿದ್ದರಿಂದ ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆದಿರಲಿಲ್ಲ. ಭಾರತದ ಚಂದ್ರಯಾನ-2ನ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿತಗೊಂಡಾಗ ಬಾಯಿಗೆ ಬಂದಂತೆ ಅಣಕ ಮಾಡಿದ್ದ ಪಾಕ್ ಈಗ ಕ್ರಿಕೆಟ್ ನಡೆಸಲೂ ಸಾಮಥ್ರ್ಯವಿಲ್ಲದ ದೇಶವಾಗಿ ಬಿಂಬಿತವಾಗಿದೆ.

Contact Us for Advertisement

Leave a Reply