ಪಾಕಿಸ್ತಾನದಲ್ಲಿ ಗೋಧಿ ಹಿಂದೆ ಓಡುತ್ತಿದ್ದಾರೆ ಜನ! ವಿಡಿಯೋ ಹಂಚಿಕೊಂಡ ಪಾಕ್‌ ನಾಯಕ!

masthmagaa.com:

ಪಾಕಿಸ್ತಾನದಲ್ಲಿ ಆಹಾರದ ಕೊರತೆ ಕೂಡ ಮಿತಿಮೀರಿದೆ. ಎಷ್ಟರ ಮಟ್ಟಿಗೆ ಅಂದ್ರೆ, ಈಗ ಗೋಧಿ ಮೂಟೆಗಳನ್ನು ತುಂಬಿಕೊಂಡು ಸಾಗುತ್ತಿದ್ದ ಟ್ರಕ್ ಹಿಂದೆ ಪಾಕಿಸ್ತಾನ ಜನರು ಓಡ್ತಿರೋ ವೀಡಿಯೋ ವೈರಲ್‌ ಆಗಿದೆ. ಈ ವೀಡಿಯೋವನ್ನು ನ್ಯಾಷನಲ್ ಇಕ್ವಾಲಿಟಿ ಪಾರ್ಟಿ ಅಧ್ಯಕ್ಷ ಸಜ್ಜದ್ ರಾಜಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ʻಇವರೆಲ್ಲಾ ಬೈಕ್ ರ‍್ಯಾಲಿ ನಡೆಸುತ್ತಿಲ್ಲ. ಬದಲಿಗೆ ಒಂದು ಪ್ಯಾಕೆಟ್ ಗೋಧಿ ಹಿಟ್ಟನ್ನು ಖರೀದಿಸೋಕೆ ಈ ರೀತಿ ಟ್ರಕ್ ಅನ್ನು ಹಿಂಬಾಲಿಸುತ್ತಿದ್ದಾರೆ. ಇದನ್ನು ನೋಡಿದರೇ ಪಾಕಿಸ್ತಾನದಲ್ಲಿ ನಮಗೆ ಭವಿಷ್ಯವಿದೆಯೇ ಅಂತ ಅವರು ಪ್ರಶ್ನೆ ಮಾಡಿದ್ದಾರೆ. ಇತ್ತ ಖೈಬರ್‌ ಪತ್ತುಂಕ್ವಾದಲ್ಲಿ ಗೋಧಿ ಇಲ್ಲ, ದರೋಡೆಗಳು ನಡೀತಾ ಇವೆ. ಹಣದುಬ್ಬರ ಜಾಸ್ತಿ ಇದೆ..ನಮಗೆ ಕರೆಂಟೂ ಇಲ್ಲ ಅಂತ ಜನ ಪ್ರತಿಭಟನೆ ಕೂತಿದ್ದಾರೆ. ಒಟ್ನಲ್ಲಿ ಪಾಕಿಸ್ತಾನದ ಪರಿಸ್ಥಿತಿ ಕ್ಷಣಕ್ಷಣಕ್ಕೂ ಚಿಂತಾಜನಕ ಆಗ್ತಿದ್ದು ಈಗ ಪ್ರಧಾನಿಯೇ ಅಸಹಾಯಕತೆಯ ಮಾತುಗಳನ್ನಾಡ್ತಿರೋದು ಅಲ್ಲಿನ ಜನರ ಆತಂಕಕ್ಕೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply