masthmagaa.com:

ಇಡೀ ಜಗತ್ತಿಗೆ ಕೊರೋನಾ ಕೊಟ್ಟ ಚೀನಾ ಈಗ ಅದಕ್ಕೆ ಲಸಿಕೆ ಕೂಡ ಕೊಡೋಕೆ ಹೊರಟಿದೆ. ಚೀನಾದ ಹಲವು ಲಸಿಕೆಗಳು ಈಗಾಗಲೇ ಕೊನೇ ಹಂತದ ಮಾನವ ಪ್ರಯೋಗ ನಡೆಸುತ್ತಿವೆ. ಅದ್ರಲ್ಲಿ ಕ್ಯಾನ್​ಸಿನೋಬಯೋ (CanSinoBio) ಮತ್ತು ಬೀಜಿಂಗ್ ಇನ್​ಸ್ಟಿಟ್ಯೂಟ್ ಆಫ್ ಬಯೋಟೆಕ್ನಾಲಜಿ ಅಭಿವೃದ್ಧಿಪಡಿಸಿರುವ ಲಸಿಕೆ ಕೂಡ ಒಂದು. ಇದರ ಪ್ರಯೋಗಕ್ಕೆ ಚೀನಾ ಆರಿಸಿಕೊಂಡಿದ್ದು ಚೆಡ್ಡಿ ದೋಸ್ತ್ ಪಕ್ಕದ ಪಾಕಿಸ್ತಾನವನ್ನ. ಇದೇ ಖುಷಿಯಲ್ಲಿ ಪಾಕಿಸ್ತಾನದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪ್ರಯೋಗಕ್ಕೆ ಒಳಪಡಲು ಆಸ್ಪತ್ರೆಗೆ ಬರ್ತಿದ್ದಾರಂತೆ. ಚೀನಾ ಲಸಿಕೆಯ ಪ್ರಯೋಗಕ್ಕೆ ಒಳಗಾದ್ರೆ ಅವರಿಗೆ 50 ಡಾಲರ್ ಹಣ ಕೊಡಲಾಗುತ್ತೆ. ಅಮೆರಿಕದ 1 ಡಾಲರ್ ಪಾಕಿಸ್ತಾನದ 158 ರೂಪಾಯಿಗೆ ಸಮ. ಹೀಗಾಗಿ ಪಾಕಿಸ್ತಾನದ​ ರೂಪಾಯಿ ಲೆಕ್ಕದಲ್ಲಿ ಹೇಳೋದಾದ್ರೆ ಓರ್ವ ಸ್ವಯಂಸೇವಕನಿಗೆ ಸುಮಾರು 8,000 ರೂಪಾಯಿ ಸಿಗುತ್ತೆ. ಅಂದ್ಹಾಗೆ ಪಾಕ್​ನಲ್ಲಿ ಕೊರೋನಾ ಲಸಿಕೆಯ ಕೊನೇ ಹಂತದ ಮಾನವ ಪ್ರಯೋಗ ನಡೆಯುತ್ತಿರೋದು ಇದೇ ಮೊದಲು.

-masthmagaa.com

Contact Us for Advertisement

Leave a Reply