masthmagaa.com:
ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದ ಪಾಕಿಸ್ತಾನ IMFನಿಂದ ಸಾಲ ಪಡೆಯೋಕೆ ಸಾಕಷ್ಟು ಪ್ರಯತ್ನಪಟ್ಟು ಕೊನೆಗೆ ಸಾಲ ಪಡೆದುಕೊಂಡಿತ್ತು. ಇದೀಗ ಪಾಕಿಸ್ತಾನ ಸಿಕ್ರೆಟ್ ಆಗಿ ಅಮೆರಿಕಗೆ ಶಸ್ತ್ರಾಸ್ತ್ರ ಮಾರಾಟ ಮಾಡಿದ್ದು, ಅದ್ರಿಂದ IMF ಸಾಲ ಪಡೆಯಲು ಸಹಾಯವಾಗಿತ್ತು ಅಂತ ತಿಳಿದು ಬಂದಿದೆ. ರಷ್ಯಾ ವಿರುದ್ಧ ಪ್ರತಿದಾಳಿ ಪ್ರಾರಂಭಿಸಿರುವ ಯುಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಸುವ ಸಲುವಾಗಿ ಪಾಕಿಸ್ತಾನ ಈ ಮಾರಾಟ ಮಾಡಿತ್ತು ಅಂತ ಅಮೆರಿಕದ ಸುದ್ಧಿಸಂಸ್ಥೆ ಇಂಟರ್‌ಸೆಪ್ಟ್ ವರದಿ ಮಾಡಿದೆ. ಅಲ್ದೆ ಅಮೆರಿಕದ ಒತ್ತಡಕ್ಕೆ ಮಣಿದ ಪಾಕಿಸ್ತಾನ ಈ ಶಸ್ತ್ರಾಸ್ತ್ರ ಮಾಡಿದ್ದು, ಯುದ್ಧದಲ್ಲಿ ಪರೋಕ್ಷವಾಗಿ ಇನ್ವಾಲ್ವ್ ಆಗಿದೆ ಅಂತ ವರದಿಯಲ್ಲಿ ತಿಳಿಸಲಾಗಿದೆ. ಅಂದ್ಹಾಗೆ ಕಳೆದ ವರ್ಷ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸರ್ಕಾರ ಯುಕ್ರೇನ್ ಯುದ್ಧದಲ್ಲಿ ನ್ಯೂಟ್ರಲ್ ಆಗಿರೋದಾಗಿ ಹೇಳಿತ್ತು. ಈ ಕಾರಣಕ್ಕೆ ಅಮೆರಿಕ ಅಸಮಧಾನ ವ್ಯಕ್ತಪಡಿಸಿತ್ತು. ಅಷ್ಟೆ ಅಲ್ದೆ ಇಮ್ರಾನ್‌ರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅಧಿಕಾರದಿಂದ ಕೆಳಗಿಳಿಸಲು ಅಲ್ಲಿನ ಸೇನೆಗೆ ಅಮೆರಿಕ ಸಹಾಯ ಮಾಡಿತ್ತು. ಹೀಗಾಗಿ ಅಮೆರಿಕದ ಒತ್ತಡದ ಕಾರಣಕ್ಕೆ ಪಾಕಿಸ್ತಾನ ಈ ಶಸ್ತ್ರಾಸ್ತ್ರ ಮಾರಾಟ ಮಾಡಿದೆ ಅಂತ ವರದಿ ಹೇಳಿದೆ.
-masthmagaa.com
Contact Us for Advertisement