masthmagaa.com:

‘ಮುಸ್ಲಿಮರನ್ನ ಪಾಕಿಸ್ತಾನಿಗಳು ಅಂತಾರೆ, ಸರ್ದಾರ್​ಗಳನ್ನ ಖಲಿಸ್ತಾನಿಗಳು ಅಂತಾರೆ, ಹೋರಾಟಗಾರರನ್ನ ನಗರ ಪ್ರದೇಶದ ನಕ್ಸಲರು ಅಂತಾರೆ, ವಿದ್ಯಾರ್ಥಿಗಳನ್ನ ಟುಕ್ಡೆ ಟುಕ್ಡೆ ಗ್ಯಾಂಗ್​ನ ಸದಸ್ಯರು ಮತ್ತು ದೇಶದ್ರೋಹಿಗಳು ಅಂತಾರೆ. ಎಲ್ಲರೂ ಉಗ್ರರು, ದೇಶ ದ್ರೋಹಿಳಾದ್ರೆ ಈ ದೇಶದಲ್ಲಿ ‘ಹಿಂದೂಸ್ತಾನಿ’ಗಳಂದ್ರೆ ಯಾರು? ಕೇವಲ ಬಿಜೆಪಿ ಕಾರ್ಯಕರ್ತರಾ? ಅಂತ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಪ್ರಶ್ನಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ DDC ಚುನಾವಣೆಗೆ ಸ್ಪರ್ಧಿಸಲು ‘ಗುಪ್ಕರ್’ ಮೈತ್ರಿಕೂಟ ನಿರ್ಧರಿಸಿದ ಬಳಿಕ ನಮ್ಮ ಮೇಲಿನ ದಬ್ಬಾಳಿಕೆ ಜಾಸ್ತಿಯಾಗಿದೆ. ನಮ್ಮ ಅಭ್ಯರ್ಥಿಗಳನ್ನ ಪ್ರಚಾರಕ್ಕಾಗಿ ಹೊರಗೆ ಹೋಗಲು ಅನುಮತಿ ಕೊಡ್ತಿಲ್ಲ. ಹೀಗೆ ಮಾಡಿದ್ರೆ ಚುನಾವಣೆಗೆ ಸ್ಪರ್ಧಿಸೋದು ಹೇಗೆ..? ರೋಶ್ನಿ ಅನ್ನೋದು ಒಂದು ಸ್ಕೀಂ ಆಗಿತ್ತು. ಆದ್ರೆ ಅದನ್ನ ಹಗರಣ ಮಾಡಲಾಯ್ತು. ಎಲ್ಲಿಯವರೆಗೆ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲವೋ ಅಲ್ಲಿಯವರೆಗೆ ಈ ಸಮಸ್ಯೆ ಹಾಗೇ ಉಳಿಯುತ್ತೆ. ಎಲ್ಲಿಯವರೆಗೆ ಸಂವಿಧಾನದ 370ನೇ ವಿಧಿಯನ್ನ ಮರು ಸ್ಥಾಪಿಸುವುದಿಲ್ಲವೋ ಅಲ್ಲಿಯವರೆಗೆ ಈ ಸಮಸ್ಯೆ ಬಗೆಹರಿಯಲ್ಲ. ಕೇವಲ ಚುನಾವಣೆ ನಡೆಸುವುದರಿಂದ ಸಮಸ್ಯೆ ಬಗೆಹರಿಯುತ್ತೆ ಅಂದುಕೊಳ್ಳಬೇಡಿ ಅಂತ ಕೇಂದ್ರ ಸರ್ಕಾರದ ವಿರುದ್ಧ ಮೆಹಬೂಬಾ ಮುಫ್ತಿ ವಾಗ್ದಾಳಿ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply